‘ಜಿಲ್ಲಾಡಳಿತ ನಡಿಗೆ ಜನರ ಬಳಿಗೆ’ ಆರಂಭ

7

‘ಜಿಲ್ಲಾಡಳಿತ ನಡಿಗೆ ಜನರ ಬಳಿಗೆ’ ಆರಂಭ

Published:
Updated:
‘ಜಿಲ್ಲಾಡಳಿತ ನಡಿಗೆ ಜನರ ಬಳಿಗೆ’ ಆರಂಭ

ಬೆಂಗಳೂರು: ಹದಿನೆಂಟು ಇಲಾಖೆಗಳ 80 ಯೋಜನೆಗಳನ್ನು ಜನರಿಗೆ ತಲುಪಿಸುವ ‘ಜಿಲ್ಲಾಡಳಿತದ ನಡಿಗೆ ಜನರ ಬಳಿಗೆ’ ಕಾರ್ಯಕ್ರಮಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಮಂಗಳವಾರ ಚಾಲನೆ ನೀಡಿದರು.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಸಮರ್ಪಕ ಅನುಷ್ಠಾನ, ಸರ್ಕಾರಿ ಜಮೀನುಗಳ ಒತ್ತುವರಿ ತೆರವು, ಸಂರಕ್ಷಣೆ, ಸದುಪಯೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ನಗರ ಜಿಲ್ಲಾಡಳಿತ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.

‘ಇದಕ್ಕಾಗಿ ತಾಲ್ಲೂಕು, ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಅಧಿಕಾರಿಗಳು ಪ್ರತಿ ಮನೆಗೆ ತೆರಳಿ, ಜನರಿಗೆ ಯೋಜನೆ

ಗಳು ತಲುಪಿವೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುತ್ತಾರೆ. ಒಂದು ವೇಳೆ ತಲುಪದಿದ್ದಲ್ಲಿ, ಸ್ಥಳದಲ್ಲಿಯೇ ಅರ್ಜಿಗಳನ್ನು ನೀಡುತ್ತಾರೆ’ ಎಂದು ಜಿಲ್ಲಾಧಿ

ಕಾರಿ ವಿ.ಶಂಕರ್‌ ವಿವರಿಸಿದರು.

‘2013ರಿಂದಲೇ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸಗಳು ನಡೆಯುತ್ತಿವೆ. ಚುನಾವಣೆಯ ನಂತರವೂ ಈ ಕೆಲಸ ಮುಂದುವರಿಯುತ್ತದೆ. ಒತ್ತುವರಿ ತೆರವು ಮಾಡಿರುವ 3 ಸಾವಿರ ಎಕರೆ ಜಾಗವನ್ನು ಜಿಲ್ಲೆಯ 780 ಕಡೆ ಸ್ಮಶಾನ ನಿರ್ಮಾಣಕ್ಕೆ ನೀಡಿದ್ದೇವೆ. ಕೆರೆಗಳ ಬಳಿ ಸಸಿ ನೆಡಲು 1,618 ಎಕರೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ’ ಎಂದು ಅವರು ತಿಳಿಸಿದರು.

‘610 ಎಕರೆ ಸರ್ಕಾರಿ ಜಾಗದಲ್ಲಿದ್ದ 154 ಅನಧಿಕೃತ ಕ್ವಾರಿಗಳನ್ನು ವಶಪಡಿಸಿಕೊಂಡು ಬಿಬಿಎಂಪಿಗೆ ನೀಡಿದ್ದೇವೆ. ಘನತ್ಯಾಜ್ಯ ಹಾಗೂ ಕಟ್ಟಡ ತ್ಯಾಜ್ಯಗಳನ್ನು ಅಲ್ಲಿ ವಿಲೇವಾರಿ ಮಾಡಿ ಕ್ವಾರಿಗಳನ್ನು ತುಂಬಿಸುವ ಕೆಲಸ ಪ್ರಗತಿಯಲ್ಲಿದೆ. ಕಸ ವಿಲೇವಾರಿ ಸಮಸ್ಯೆಗೆ ಇದರಿಂದ ಕೊಂಚ ಪರಿಹಾರ ಸಿಕ್ಕಂತಾಗಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry