ಹೆಲಿ ಟ್ಯಾಕ್ಸಿ ದುಬಾರಿ ದರಕ್ಕೆ ಲೇವಡಿ

ಶನಿವಾರ, ಮಾರ್ಚ್ 23, 2019
28 °C

ಹೆಲಿ ಟ್ಯಾಕ್ಸಿ ದುಬಾರಿ ದರಕ್ಕೆ ಲೇವಡಿ

Published:
Updated:
ಹೆಲಿ ಟ್ಯಾಕ್ಸಿ ದುಬಾರಿ ದರಕ್ಕೆ ಲೇವಡಿ

ಬೆಂಗಳೂರು: ನಗರದ ಎಲೆಕ್ಟ್ರಾನಿಕ್‌ ಸಿಟಿ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ‘ಹೆಲಿ ಟ್ಯಾಕ್ಸಿ’ ಹಾರಾಟ ಸೋಮವಾರ ಆರಂಭವಾಗಿದೆ.

ದೇಶದಲ್ಲೇ ಮೊದಲ ಬಾರಿಗೆ ವಿಮಾನ ಪ್ರಯಾಣಿಕರಿಗಾಗಿ ಈ ಸೇವೆ ಆರಂಭಿಸಲಾಗಿದೆ. ಥುಂಬಿ ಏವಿಯೇಷನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಮೊಬೈಲ್‌ ಆ್ಯಪ್‌ ಮೂಲಕ ಟಿಕೆಟ್‌ ಕಾಯ್ದಿರಿಸಿ ಇದರಲ್ಲಿ ಪ್ರಯಾಣಿಸಬಹುದಾಗಿದೆ.

ರಸ್ತೆ ಮಾರ್ಗದ ಮೂಲಕ ಎಲೆಕ್ಟ್ರಾನಿಕ್‌ ಸಿಟಿಯಿಂದ ವಿಮಾನ ನಿಲ್ದಾಣ ತಲುಪಲು ಎರಡೂವರೆ ಗಂಟೆ ಬೇಕಾಗುತ್ತದೆ. ಅದೇ ಹೆಲಿಕಾಪ್ಟರ್‌ನಲ್ಲಿ 15 ನಿಲ್ದಾಣ ತಲುಪಬಹುದಾಗಿದೆ.

ಇಬ್ಬರು ಪೈಲಟ್‌ಗಳು ಹಾಗೂ 6ರಿಂದ 13 ಪ್ರಯಾಣಿಕರು ಪ್ರಯಾಣಿಸಬಹುದಾದ ಬೆಲ್‌– 412 ಮಾದರಿ ಹೆಲಿ–ಟ್ಯಾಕ್ಸಿ ಇದಾಗಿದೆ.

ಹೆಲಿಟ್ಯಾಕ್ಸಿಯಲ್ಲಿ ಸಂಚರಿಸುವಾಗ ತೆಗೆದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ ಹಲವರು, ಖುಷಿ ಹಂಚಿಕೊಂಡಿದ್ದಾರೆ. ಜತೆಗೆ, ₹ 4,000ದಷ್ಟು ಶುಲ್ಕ ತೆರಬೇಕಾದ ಈ ದುಬಾರಿ ಪ್ರಯಾಣ ದರದ ಬಗ್ಗೆ ಹಲವಾರು ಪ್ರಯಾಣಿಕರು ಲೇವಡಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry