ತಲೆಮರೆಸಿಕೊಂಡ ಆರೋಪಿ ‘ಹ್ಯಾಕರ್‌’

7

ತಲೆಮರೆಸಿಕೊಂಡ ಆರೋಪಿ ‘ಹ್ಯಾಕರ್‌’

Published:
Updated:
ತಲೆಮರೆಸಿಕೊಂಡ ಆರೋಪಿ ‘ಹ್ಯಾಕರ್‌’

ಬೆಂಗಳೂರು: ವಿದ್ವತ್‌ ಮೇಲೆ ನಡೆದ ಹಲ್ಲೆ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆತಲೆಮರೆಸಿಕೊಂಡಿರುವ ಆರೋಪಿ ಶ್ರೀಕೃಷ್ಣ (24) ‘ಹ್ಯಾಕರ್‌’ ಆಗಿದ್ದ ಎಂಬ ಸಂಗತಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಮೊಹಮದ್ ನಲಪಾಡ್‌ ಹಾಗೂ ಆತನ ಸಹಚರರು ಈಗಾಗಲೇ ಜೈಲು ಸೇರಿದ್ದಾರೆ. ಶ್ರೀಕೃಷ್ಣನ ಪತ್ತೆಗೆ ಸಿಸಿಬಿ ಡಿಸಿಪಿ ರಾಮನಿವಾಸ್‌ ಸೆಪಟ್‌ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ.

‘ಎಂಜಿನಿಯರಿಂಗ್‌ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ ಶ್ರೀಕೃಷ್ಣ, 2014ರಿಂದಲೂ ಮೊಬೈಲ್‌ ಬಳಕೆ ಮಾಡುತ್ತಿಲ್ಲ. ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್‌ ಮಾತ್ರ ಬಳಸುತ್ತಿದ್ದ. ತಂತ್ರಜ್ಞಾನ ಬಳಕೆಯಲ್ಲಿ ಪರಿಣಿತನಾಗಿದ್ದಆತ, ಮೊಹಮದ್ ನಲಪಾಡ್‌ ಸ್ಥಾಪಿಸಿದ್ದ ‘ನಲಪಾಡ್‌ ತಂಡ’ದಲ್ಲಿ ಗುರುತಿಸಿ

ಕೊಂಡಿದ್ದ. ಸಾಫ್ಟ್‌ವೇರ್‌ ಹಾಗೂ ವೆಬ್‌ಸೈಟ್‌ ಹ್ಯಾಕ್ ಮಾಡುವ ಕಲೆಯೂ ಆತನಿಗೆ ಗೊತ್ತಿತ್ತು ಎಂಬುದನ್ನು ಸ್ನೇಹಿತರು ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.‘‌ಕುಟುಂಬದವರು, ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕಿದ್ದೇವೆ. ಆರೋಪಿಯು ವಿದೇಶಕ್ಕೆ ಹೋಗಿರುವ ಅನುಮಾನವಿದೆ. ಲುಕ್‌ಔಟ್ ನೋಟಿಸ್‌ ಜಾರಿ ಮಾಡಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry