ಮಾಲಿನ್ಯ ಪ್ರಮಾಣ ಕುಂಬ್ಳೆ ವೃತ್ತದ ಬಳಿ ಪ್ರದರ್ಶನ ಫಲಕ

7

ಮಾಲಿನ್ಯ ಪ್ರಮಾಣ ಕುಂಬ್ಳೆ ವೃತ್ತದ ಬಳಿ ಪ್ರದರ್ಶನ ಫಲಕ

Published:
Updated:

ಬೆಂಗಳೂರು: ಮಾಲಿನ್ಯ ಪ್ರಮಾಣವನ್ನು ತೋರಿಸುವ ಭಾರಿ ಗಾತ್ರದಡಿಜಿಟಲ್‌ ಫಲಕವನ್ನು ಮಹಾತ್ಮಗಾಂಧಿ ರಸ್ತೆಯ ಅನಿಲ್‌ ಕುಂಬ್ಳೆ ವೃತ್ತದ ಬಳಿ ಅಳವಡಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಧರಿಸಿದೆ.

ರಾಜ್ಯದ ವಿವಿಧ ಕಡೆಗಳಲ್ಲಿರುವ ಸ್ವಯಂಚಾಲಿತ ಮಾಲಿನ್ಯ ಮಾಪನಾ ಕೇಂದ್ರಗಳಲ್ಲಿ ದಾಖಲಾಗುವ ವಾಯು, ಜಲ ಹಾಗೂ ಶಬ್ದ ಮಾಲಿನ್ಯದ ವಿವರಗಳನ್ನು ಇದರಲ್ಲಿ ಪ್ರದರ್ಶಿಸಲಾಗುತ್ತದೆ. ಫಲಕದ ಒಂದು ಕಾಲಂನಲ್ಲಿ ಬೆಂಗಳೂರು ನಗರದ ಮಾಲಿನ್ಯ ಮಟ್ಟಗಳ ವಿವರ, ಇನ್ನೊಂದು ಕಾಲಂನಲ್ಲಿ ರಾಜ್ಯದ ಇತರ ಪ್ರಮುಖನಗರಗಳ ಮಾಲಿನ್ಯ ಮಟ್ಟವನ್ನು ತೋರಿಸಲಾಗುತ್ತದೆ.

‘ಮಾಲಿನ್ಯ ತಡೆಯುವ ಬಗ್ಗೆ ಜನಜಾಗೃತಿ ಮೂಡಿಸಲು ಈ ಕ್ರಮಕೈಗೊಳ್ಳಲಾಗಿದೆ. ಫಲಕವು 12 ಅಡಿ ಉದ್ದ 18 ಅಡಿ ಎತ್ತರ ಇರಲಿದೆ. ಈ ಪ್ರದರ್ಶನ ಫಲಕ ಅಳವಡಿಸುವುದಕ್ಕೆ ಮಂಡಳಿಯು ₹ 3 ಕೋಟಿ ವೆಚ್ಚ ಮಾಡಿದೆ. ಕೆನಡಾದಲ್ಲಿ ಬಳಸುತ್ತಿರುವ ತಂತ್ರಜ್ಞಾನವನ್ನು ಆಧರಿಸಿ ಇದನ್ನು ರೂಪಿಸಲಾಗಿದೆ’ ಎಂದು ಮಂಡಳಿಯ ಅಧ್ಯಕ್ಷ ಲಕ್ಷ್ಮಣ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry