‘ರಾಜಕೀಯದಲ್ಲಿ ಮಹಿಳಾ ಸಬಲೀಕರಣ’ - ಪ್ರಜಾವಾಣಿ ಸಂವಾದ

7
ಸಚಿವೆ ಉಮಾಶ್ರೀ, ಸಂಸದೆ ಶೋಭಾ ಕರಂದ್ಲಾಜೆ, ಲಕ್ಷ್ಮಿ ಅಶ್ವಿನ್ ಗೌಡ ಭಾಗಿ

‘ರಾಜಕೀಯದಲ್ಲಿ ಮಹಿಳಾ ಸಬಲೀಕರಣ’ - ಪ್ರಜಾವಾಣಿ ಸಂವಾದ

Published:
Updated:
‘ರಾಜಕೀಯದಲ್ಲಿ ಮಹಿಳಾ ಸಬಲೀಕರಣ’ - ಪ್ರಜಾವಾಣಿ ಸಂವಾದ

ಬೆಂಗಳೂರು: ಪ್ರಜಾವಾಣಿ ಜತೆ ಸಂವಾದದಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿ, ಸಚಿವೆ ಉಮಾಶ್ರೀ, ಜೆಡಿಎಸ್ ಪಕ್ಷದ ಲಕ್ಷ್ಮಿ ಅಶ್ವಿನ್ ಗೌಡ ಮತ್ತು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ರಾಜಕೀಯದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ. ಪಕ್ಷದೊಳಗಿನ ಪ್ರಾತಿನಿಧ್ಯ, ಒಟ್ಟು ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ದೊರೆಯುವ ಅವಕಾಶಗಳು ಮತ್ತು ಅದರ ಮಿತಿಯ ಕುರಿತ ಈ ಚರ್ಚೆಗೆ ವಿವಿಧ ಕ್ಷೇತ್ರಗಳ ತಜ್ಞರೂ ಜೊತೆಯಾಗುತ್ತಿದ್ದಾರೆ.

1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದ ನಂತರ ಲೋಕಸಭೆಯಲ್ಲಿ ಮಹಿಳೆಯರ ಪ್ರಮಾಣ ಶೇ 10ರ ಗಡಿ ದಾಟಲು ಐದು ದಶಕ­ಗ­ಳಿಗೂ ಹೆಚ್ಚು ಕಾಲ ಕಾಯಬೇಕಾಯಿತು. ಇದಾದನಂತರ ಲೋಕ­ಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆ­ಯರಿಗೆ ಶೇ 33 ರಷ್ಟು ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶದ ಮಹಿಳಾ ಮೀಸಲು ಮಸೂದೆ ಅಂಗೀ­ಕಾ­ರ­ ಇನ್ನೂ ಕನ್ನಡಿ ಗಂಟಾಗಿದೆ. ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕಾದರೆ ಮಹಿಳೆಯರಿಗೆ ಇರಬೇಕಾದ ಹಿನ್ನೆಲೆ ಮತ್ತು ಬೆಂಬಲ ವ್ಯವಸ್ಥೆಯ ಸ್ವರೂಪವಾದರೂ ಎಂತಹುದು? ರಾಜ್ಯ ರಾಜಕಾರಣದಲ್ಲಾಗಲಿ ರಾಷ್ಟ್ರ ರಾಜಕಾರಣದಲ್ಲಾಗಲಿ ಮಹಿಳೆಯರ ಸಂಖ್ಯಾತ್ಮಕ ಮತ್ತು ಗುಣಾತ್ಮಕ ಭಾಗವಹಿಸುವಿಕೆಯನ್ನು ಹೆಚ್ಚಿಸಲು ನಾವೇನು ಮಾಡಬೇಕು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry