ನಿಪ್ಪಾಣಿಯ ಅಮಿತ್‌ ಪಾಟೀಲ್ ಪ್ರಥಮ

ಶನಿವಾರ, ಮಾರ್ಚ್ 23, 2019
28 °C
ರಾಷ್ಟ್ರೀಯ ಮಟ್ಟದ ಆಹ್ವಾನಿತ ಕಬಡ್ಡಿ ಟೂರ್ನಿಯ ಅಂಗವಾಗಿ ಮ್ಯಾರಥಾನ್‌ ಸ್ಪರ್ಧೆ ಆಯೋಜನೆ

ನಿಪ್ಪಾಣಿಯ ಅಮಿತ್‌ ಪಾಟೀಲ್ ಪ್ರಥಮ

Published:
Updated:
ನಿಪ್ಪಾಣಿಯ ಅಮಿತ್‌ ಪಾಟೀಲ್ ಪ್ರಥಮ

ಜಮಖಂಡಿ: ಸ್ಥಳೀಯ ತಾಲ್ಲೂಕು ಕ್ರೀಡಾಂಗಣದಲ್ಲಿ ಎಂಆರ್‌ಎನ್‌ ಫೌಂಡೇಷನ್‌ ಆಶ್ರಯದಲ್ಲಿ ಅಖಿಲ ಭಾರತ ’ಎ’ ಗ್ರೇಡ್ ಕಬಡ್ಡಿ ಟೂರ್ನಿಯ ಅಂಗವಾಗಿ ಮಂಗಳವಾರ ನಗರದಲ್ಲಿ ಮ್ಯಾರಥಾನ್ ಸ್ಪರ್ಧೆ ನಡೆಯಿತು.

ವಿವಿಧ ವಿಭಾಗದಲ್ಲಿ ಒಟ್ಟು 600 ಓಟಗಾರರು ಭಾಗವಹಿಸಿದ್ದರು. ನಿಪ್ಪಾಣಿಯ ಅಮಿತ್‌ ಪಾಟೀಲ ಮುಕ್ತ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು. ನಿಪ್ಪಾಣಿಯ ರಾಜು ಐನಾಪುರ ದ್ವಿತೀಯ ಹಾಗೂ ಮಹಾರಾಷ್ಟ್ರದ ಅಸ್ಲಮ್‌ ಪಿರಗಣವರ ತೃತೀಯ ಸ್ಥಾನ ಪಡೆದರು.

20 ವರ್ಷದೊಳಗಿನ ವಿಭಾಗದಲ್ಲಿ ಕೊಣ್ಣೂರಿನ ಸಚಿನ ಬಟಕುರ್ಕಿ ಪ್ರಥಮ, ಅಜಯ್ ಕೊಕಟನೂರ ದ್ವಿತೀಯ, ಜಮಖಂಡಿಯ ಕಿರಣ್ ಶಿರಹಟ್ಟಿ ತೃತೀಯ ಸ್ಥಾನ ಪಡೆದರು.

40 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಬನಹಟ್ಟಿಯ ಶ್ರೀಶೈಲ ಸಾರವಾಡ (ಪ್ರಥಮ), ಹುಳ್ಯಾಳದ ರವಿ ಕವಟೇಕರ್‌( ದ್ವಿತೀಯ) ಮತ್ತು ಹಿಪ್ಪರಗಿ ನಾಗರಾಜ ಕಣಬೂರ (ತೃತೀಯ) ಸ್ಥಾನ ಪಡೆದರು.

60 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಜಮಖಂಡಿಯ ಅಪ್ಪಾಸಾಬ ಕಡಪಟ್ಟಿ(ಪ್ರಥಮ), ವಿಜಯಪುರದ ಲಕ್ಷ್ಮಣ ರಾಥೋಡ (ದ್ವಿತೀಯ) ಮತ್ತು ಕಲಬುರ್ಗಿಯ ಶಿವರಾಜ ಗಂಜಿ (ತೃತೀಯ) ಸ್ಥಾನ ಪಡೆದುಕೊಂಡರು.

60 ವರ್ಷದ ನಂತರದವರ ಸ್ಪರ್ಧೆಯಲ್ಲಿ ಜಮಖಂಡಿಯ ಎಲ್‌.ಐ.ಪವಾರ (ಪ್ರಥಮ), ಸಿ.ಟಿ.ಮೇಗಾಡಿ (ದ್ವಿತೀಯ) ಮತ್ತು ಶ್ರೀಧರ ಜೋಶಿ (ತೃತೀಯ) ಸ್ಥಾನ ಪಡೆದರು.

ಬೆಳಗ್ಗೆ ಎಸ್‌ಆರ್‌ಎ ಕ್ಲಬ್‌ ಬಳಿ ಆರಂಭವಾದ ಮ್ಯಾರಥಾನ್ ಸ್ಪರ್ಧೆಗೆ ಜಮಖಂಡಿಯ ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಚಾಲನೆ ನೀಡಿದರು.

ಮಾಜಿ ಸಚಿವ ಮುರಗೇಶ ನಿರಾಣಿ, ನಿರಾಣಿ ಫೌಂಡೇಷನ್‌ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ, ಉಮೇಶ ಮಹಾಬಳಶೆಟ್ಟಿ, ಯೋಗಪ್ಪ ಸವದಿ, ಜಿ.ಕೆ.ಮಠದ, ಪ್ರೊ.ಬಸವರಾಜ ಕೊಣ್ಣೂರ, ಎನ್‌.ಎಸ್‌.ದೇವರವರ, ಸಂತೋಷ ಚನಾಳ, ಶ್ರೀಶೈಲ ಪಾಟೀಲ, ಚನ್ನಪ್ಪಾ ಬಿರಾದಾರ, ಡಿ.ಎಂ.ಜನವಾಡ, ನರಸಿಂಹ ನಾಯಕ, ಪ್ರದೀಪ ಮಹಾಲಿಂಗಪುರ, ಹನಮಂತರಾಯ ಬಿರಾದಾರ, ರಮೇಶ ಮುರಗೋಡ ಇದ್ದರು.

ವಿಶ್ವಜ ಕಾಡದೇವರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry