ಬೈರಮಂಗಲ ವಿಎಸ್‌ಎಸ್‌ಎನ್‌: ‌₹3.15 ಕೋಟಿ ಸಾಲ ಮನ್ನಾ

7

ಬೈರಮಂಗಲ ವಿಎಸ್‌ಎಸ್‌ಎನ್‌: ‌₹3.15 ಕೋಟಿ ಸಾಲ ಮನ್ನಾ

Published:
Updated:

ಬಿಡದಿ (ರಾಮನಗರ): ರೈತರು ಸಾಲ ಮರುಪಾವತಿಯನ್ನು ಸೂಕ್ತ ಸಮಯಕ್ಕೆ ಮಾಡಿದಲ್ಲಿ ಮತ್ತೆ ಬಡ್ಡಿರಹಿತ ಸಾಲ ಪಡೆಯಲು ಅವಕಾಶ ಇದೆ ಎಂದು ಭೈರಮಂಗಲ ವ್ಯವಸಾಯ ಸೇವಾ ಸಹಕಾರ ಸಂಘದ (ವಿಎಸ್‍ಎಸ್‍ಎನ್) ಅಧ್ಯಕ್ಷ ಎಚ್.ಎಸ್. ಸಿದ್ಧರಾಜು ಹೇಳಿದರು.

ಭೈರಮಂಗಲ ವಿಎಸ್‍ಎಸ್‍ಎನ್ ಕಚೇರಿಯಲ್ಲಿ ಮಂಗಳವಾರ ರೈತರಿಗೆ ರೂಪೇ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರದ ಸಾಲ ಮನ್ನಾ ನಿರ್ಧಾರದಿಂದ ಇಲ್ಲಿನ ವಿಎಸ್‍ಎಸ್‍ಎನ್‌ನ 650 ಫಲಾನುಭವಿಗಳಿಗೆ ಪ್ರಯೋಜನವಾಗಿದ್ದು, ₹3.15 ಕೋಟಿ ಸಾಲ ಮನ್ನಾ ಆಗಿದೆ. ಮೊದಲ ಹಂತವಾಗಿ ₹1.5 ಕೋಟಿಯನ್ನು ರೈತರಿಗೆ ಮರು ಹಂಚಿಕೆ ಮಾಡಲು ಸರ್ಕಾರ ಮಂಜೂರು ಮಾಡಿದೆ. ಇದರಲ್ಲಿ 114 ಜನ ರೈತರಿಗೆ ಹಂಚಿಕೆ ಮಾಡಲಾಗುತ್ತಿದೆ. ಪ್ರತಿಯೊಬ್ಬ ಸದಸ್ಯರ ಉಳಿತಾಯ ಖಾತೆಗೆ ಹಣವನ್ನು ನೇರವಾಗಿ ಜಮಾಮಾಡಿ, ರೂಪೇ ಕಾರ್ಡುಗಳನ್ನು ವಿತರಣೆ ಮಾಡಲಾಗುತ್ತಿದೆ. ರೈತರು ಹಣವನ್ನು ಯಾವುದೇ ಎಟಿಎಂ ಕೇಂದ್ರಗಳಲ್ಲಿ ಪಡೆಯಬಹುದು’ ಎಂದು ಹೇಳಿದರು.

ಜಿಲ್ಲಾ ಬಿ.ಡಿ.ಸಿ.ಸಿ ಬ್ಯಾಂಕ್‌ 100 ರೈತರಿಗೆ ಹೊಸ ಸಾಲ ನೀಡಲು ₹40 ಲಕ್ಷ ಮಂಜೂರು ಮಾಡಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಕೆಲವು ರೈತರಿಗೆ ರೂಪೇ ಕಾರ್ಡುಗಳನ್ನು ವಿತರಿಸಲಾಯಿತು.

ವಿಎಸ್‍ಎಸ್‍ಎನ್ ಉಪಾಧ್ಯಕ್ಷ ಕೃಷ್ಣಪ್ಪ, ನಿರ್ದೇಶಕರಾದ ಬಿ.ಲಕ್ಷ್ಮೀಪತಿ, ಸಂಜೀವರೆಡ್ಡಿ, ಮಾದಯ್ಯ, ಪದ್ಮನಾಭಯ್ಯ, ಡಿ.ನಾಗರಾಜು, ಶಿವಣ್ಣ, ನಾಗರತ್ನಮ್ಮ, ತಾಯಮ್ಮ, ಸಂಘದ ಕಾರ್ಯದರ್ಶಿ ಎಂ.ಎ. ಶಿವರಾಜು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry