7

ಲೋಕಾಯುಕ್ತರಿಗೆ ಚೂರಿ ಇರಿತ: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ

Published:
Updated:
ಲೋಕಾಯುಕ್ತರಿಗೆ ಚೂರಿ ಇರಿತ: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ

ಬೆಂಗಳೂರು: 'ನ್ಯಾಯಮೂರ್ತಿಗೆ ರಕ್ಷಣೆ ಕೊಡದ ಸರ್ಕಾರ ಜನಸಾಮಾನ್ಯರಿಗೇನು ಕೊಟ್ಟೀತು, ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಕುಸಿದಿದೆಯೆಂದು ಊಹಿಸಿ..' ಎಂದು ಕೇಂದ್ರ ಸಚಿವ ಸದಾನಂದ ಗೌಡ ಟ್ವೀಟಿಸಿದ್ದಾರೆ.

ಕರ್ನಾಟಕ ಲೋಕಾಯುಕ್ತರಾದ ನ್ಯಾ.ವಿಶ್ವನಾಥ ಶೆಟ್ಟಿ ಅವರಿಗೆ ವ್ಯಕ್ತಿಯೊಬ್ಬ ಅವರದ್ದೇ ಕಚೇರಿಯಲ್ಲಿ ಚಾಕೂವಿನಿಂದ ಇರಿದ್ದಿದ್ದಾನೆಂದರೆ ಕಾನೂನು ಸುವ್ಯವಸ್ಥೆ ಎಷ್ಟರಮಟ್ಟಿಗೆ ಕುಸಿದಿದೆ ಎಂದು ಊಹಿಸಿ ಎಂದಿರುವ ಸದಾನಂದ ಗೌಡ ಅವರು ತಕ್ಷಣವೇ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗ್ರಹ ಸಚಿವ ರಾಮಲಿಂಗಾರೆಡ್ಡಿ ಕೂಡಲೆ ರಾಜಿನಾಮೆ ಕೊಡಬೇಕು. ಲೋಕಾಯುಕ್ತ ನ್ಯಾಯಮೂರ್ತಿ ಅವರಿಗೆ ಪರಿಸ್ಥಿತಿ ಹಿಗಾದ್ರೆ ಸಾಮಾನ್ಯ ಜನರ ಪರಿಸ್ಥಿತಿ ಏನು’ ಎಂದು ರಾಜ್ಯ ಸರ್ಕಾರವನ್ನು ಸಂಸದ ಪ್ರಹ್ಲಾದ ಜೋಶಿ  ಪ್ರಶ್ನಿಸಿದ್ದಾರೆ.

‘ನಿಧಾನವಾಗಿ ಲೋಕಾಯುಕ್ತದ ಶಕ್ತಿಗುಂದಿಸಿದ ಕಾಂಗ್ರೆಸ್‌ ಸರ್ಕಾರ, ಲೋಕಾಯುಕ್ತ ಸಂಸ್ಥೆಯನ್ನೇ ಮುಗಿಸಿತು. ಈಗ ಲೋಕಾಯುಕ್ತರನ್ನು ಮುಗಿಸುವ ಪ್ರಯತ್ನ...’ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry