ಸೋಮವಾರಪೇಟೆ: ನಿಲ್ಲದ ಕಾಡಾನೆ ದಾಳಿ– ಬೆಳೆ ನಷ್ಟ

ಬುಧವಾರ, ಮಾರ್ಚ್ 20, 2019
25 °C

ಸೋಮವಾರಪೇಟೆ: ನಿಲ್ಲದ ಕಾಡಾನೆ ದಾಳಿ– ಬೆಳೆ ನಷ್ಟ

Published:
Updated:
ಸೋಮವಾರಪೇಟೆ: ನಿಲ್ಲದ ಕಾಡಾನೆ ದಾಳಿ– ಬೆಳೆ ನಷ್ಟ

ಸೋಮವಾರಪೇಟೆ: ಕಾಡಿಗೆ ಬೆಂಕಿ ಬೀಳುತ್ತಿರುವುದು ಹೆಚ್ಚಾದಂತೆ ಕಾಡಾನೆಗಳು ಹಗಲು ವೇಳೆಯೇ ಗ್ರಾಮದತ್ತ ಮುಖಮಾಡುತ್ತಿವೆ. ನಿಡ್ತ ಮೀಸಲು ಅರಣ್ಯದಲ್ಲಿರುವ ಕಾಡಾನೆಗಳ ಹಿಂಡು, ಆಲೂರು, ಮಾಲಂಬಿ, ನಿಡ್ತ, ಹಿತ್ಲುಕೇರಿ, ಕಣಗಾಲು, ಗಣಗೂರು, ಹಿತ್ಲುಗದ್ದೆ, ಕೂಗೂರು, ಚಿಕ್ಕಾರ, ಹಿರಿಕರ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

ಒಂಟಿ ಸಲಗವೊಂದು, ಈಚೆಗೆ ಚಿಕ್ಕಾರ ಗ್ರಾಮ ಸಮೀಪದ ಮಾದಗಿತ್ತಿ ಕೆರೆ ಸಮೀಪದಲ್ಲಿ ಆನೆಕಂದಕವನ್ನು ದಾಟಿ, ಚಿಕ್ಕಾರ, ಹಿರಿಕರ ಗ್ರಾಮದ ಕಾಫಿ ಹಾಗೂ ಬಾಳೆ ತೋಟಕ್ಕೆ ನುಗ್ಗಿ ಫಸಲು ನಾಶ ಪಡಿಸಿದೆ. ಶಾಂತಳ್ಳಿ ಹೋಬಳಿಯ ಕೂತಿ ಗ್ರಾಮದಲ್ಲೂ ಕಾಡಾನೆಗಳ ಹಿಂಡು ಗ್ರಾಮ ಪ್ರವೇಶಿಸಿ ಆತಂಕ ಸೃಷ್ಟಿಸಿವೆ ಎಂದು ಗ್ರಾಮಸ್ಥ ಪರಮೇಶ್‌ ಅಳಲು ತೋಡಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry