ಅಂದದ ಮುಖಕೆ ನತ್ತೇ ಭೂಷಣ

ಮಂಗಳವಾರ, ಮಾರ್ಚ್ 26, 2019
31 °C

ಅಂದದ ಮುಖಕೆ ನತ್ತೇ ಭೂಷಣ

Published:
Updated:
ಅಂದದ ಮುಖಕೆ ನತ್ತೇ ಭೂಷಣ

ಆತ್ಮವಿಶ್ವಾಸಕ್ಕೆ...

ಕುತ್ತಿಗೆಯ ಕೆಳಗೆ ಹಾಕಿಕೊಳ್ಳುವ ಸ್ಟಡ್ ಯುವತಿಯರ ಮೆರುಗು ಹೆಚ್ಚಿಸಿದೆ. ಕಾಲರ್‌ಬೋನ್‌ನ ಜಾಗದಲ್ಲಿ, ಎಲ್ಲರೂ ನೋಡುವಂತೆ ಹೊಳೆಯುವ ಈ ಕಂಠದ ಆಭರಣ ಆತ್ಮವಿಶ್ವಾಸದ ಪ್ರತೀಕವೂ ಹೌದಂತೆ. ಕುತ್ತಿಗೆ ಹಿಂಭಾಗಕ್ಕೂ ಚುಚ್ಚಿಸಿಕೊಳ್ಳುವ ಟ್ರೆಂಡ್ ಇದೆ. ಇದನ್ನು ‘ನೇಪ್ ಪಿಯರ್ಸಿಂಗ್’ ಎನ್ನುತ್ತಾರೆ.

***

ಕಿವಿಯಲ್ಲಿ ನಕ್ಷತ್ರ ಪುಂಜ

ಕಿವಿಗೆ ಒಂದೋ ಎರಡೋ ಓಲೆಗಳನ್ನು ಹಾಕಿಕೊಳ್ಳುವ ಬದಲು ನಕ್ಷತ್ರ ಪುಂಜದಂತೆ ಕಾಣುವ ಹಾಗೆ ಚುಚ್ಚಿಸಿ ಗುಚ್ಛದಂಥ ಓಲೆ ತೊಡುವುದು ಟ್ರೆಂಡ್. ಹೀಗೆ ಓಲೆಯನ್ನು ತೊಡುವುದು ನೇರ ನಡೆಯನ್ನು ಪ್ರದರ್ಶಿಸಿದಂತೆ.

ಹುಬ್ಬಿನ ನಡುವೆ...

ಹುಬ್ಬುಗಳ ನಡುವೆ, ಮೂಗಿನ ನೇರಕ್ಕೆ ಚುಚ್ಚಿಸಿಕೊಳ್ಳುವುದನ್ನು ಬ್ರಿಡ್ಜ್ ಪಿಯರ್ಸಿಂಗ್ ಎನ್ನುತ್ತಾರೆ. ಉದ್ದ, ಅಡ್ಡ ಎರಡೂ ವಿನ್ಯಾಸದಲ್ಲಿ ಇದನ್ನು ಚುಚ್ಚಿಸಿಕೊಳ್ಳಬಹುದು. ಹಣೆಯ ಬದಿಯ ಖಾಲಿ ಜಾಗಕ್ಕೆ ‘ಸರ್ಫೇಸ್ ಪಿಯರ್ಸಿಂಗ್’ ಲಭ್ಯವಿದೆ. ಇದು ಜಂಭವನ್ನು ತೋರುವ ಒಂದು ವಿಧಾನವಂತೆ.

ಮೂಗಿಗೆ ಹೊಸದೇನು?

ಮೂಗು ಚುಚ್ಚಿಕೊಳ್ಳುವುದು ಮಾಮೂಲಿ. ಆದರೆ ಈ ಶೈಲಿ ಹಾಗಲ್ಲ. ಮೂಗಿನ ಕೆಳ ಮಧ್ಯದಲ್ಲಿ ಚುಚ್ಚಿಸಿಕೊಳ್ಳುವ ಶೈಲಿ. ಇದನ್ನೇ ‘ಸೆಪ್ಟ್ರಿಲ್ ಪಿಯರ್ಸಿಂಗ್’ ಎನ್ನುತ್ತಾರೆ. ಹಾಗೆಯೇ ಎರಡು ಮೂಗುಬೊಟ್ಟನ್ನು ಒಂದೇ ಕಡೆ ತೊಟ್ಟುಕೊಳ್ಳುವುದೂ ಚೆಂದ ಎನ್ನುತ್ತಿದ್ದಾರ ಹುಡುಗಿಯರು. ಇದಕ್ಕೆ ಡಬಲ್ ಪಿಯರ್ಸಿಂಗ್ ಎಂದು ಹೆಸರನ್ನೂ ಇಟ್ಟಿದ್ದಾರೆ.

ತುಟಿಯ ಮೇಲೆ...

ತುಟಿ ಕೆಳಗೆ ಚುಚ್ಚಿಸಿಕೊಳ್ಳುವ ರೂಢಿ ಬಂದು ಸಾಕಷ್ಟು ವರ್ಷಗಳೇ ಆಗಿವೆ.ಅದರ ಮುಂದುವರಿದ ರೂಪವಾಗಿ ಈಗ ಸಾಕಷ್ಟು ವಿನ್ಯಾಸಗಳು ಪರಿಚಿತಗೊಂಡಿವೆ. ತುಟಿಯ ಮಧ್ಯದಲ್ಲಿ ರಿಂಗ್ ಹಾಕಿಕೊಂಡಂತೆ ಇರುವುದಷ್ಟೇ ಅಲ್ಲದೇ, ಏಂಜಲ್ ಬೈಟ್ಸ್, ಸ್ಪೈಡರ್ ಬೈಟ್, ಡಾಲ್ಫಿನ್ ಬೈಟ್, ಸ್ನೇಕ್ ಬೈಟ್, ಸ್ಪೈಡರ್ ಬೈಟ್, ಶಾರ್ಕ್ ಬೈಟ್ ಹೀಗೆ 14 ವಿನ್ಯಾಸಗಳು ಪಟ್ಟಿಯಲ್ಲಿವೆ. ಹೀಗೆ ಚುಚ್ಚಿಸಿಕೊಳ್ಳುವುದು ಸ್ವಾತಂತ್ರ್ಯದ ಸಂಕೇತವೂ ಹೌದು. ಮುಂಭಾಗದ ಒಸಡಿನ ಮೇಲೆ ಚುಚ್ಚಿಸಿಕೊಳ್ಳುವ ರೂಢಿಯೂ ಇದೆ. ಅಷ್ಟೇ ಏಕೆ, ಕಿರುನಾಲಗೆಗೆ ಸಿಕ್ಕಿಸಿಕೊಂಡಂತೆ ಚುಚ್ಚಿಸಿ ಆಭರಣವನ್ನು ತೊಡುತ್ತಾರೆ.

ಗುಳಿ ಕೆನ್ನೆ ಚೆಲುವು...

ಎಷ್ಟೋ ಮಂದಿ, ಕೆನ್ನೆ ಮೇಲೆ ಗುಳಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಂದುಕೊಳ್ಳುತ್ತಾರೆ. ಅದಕ್ಕೆಂದು ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿಕೊಳ್ಳುತ್ತಾರೆ. ಆದರೆ ಗುಳಿಯಂತೆ ಕಾಣಲು ‘ಚೀಕ್ ಪಿಯರ್ಸಿಂಗ್’ ಮಾಡಿಸಿಕೊಳ್ಳು ವುದು ಈಗಿನ ಯುವತಿಯರಿಗೆ ಸುಲಭದ ಟ್ರಿಕ್. ಇದು ಅಂದದ ಅಪೇಕ್ಷೆ ತೋರುವ ಪ್ರತೀಕವಂತೆ.

ಪಿಂಕಿ ಫಿಂಗರ್

ಬೆರಳನ್ನು ಸುಂದರವಾಗಿ ಕಾಣಿಸಲು ಉಂಗುರ ತೊಡುವುದೇನೋ ಇದೆ. ಆದರೆ ಅಲ್ಲೂ ಪಿಯರ್ಸಿಂಗ್ ಮಾಡಿಸಿದರೆ ಇನ್ನೂ ಚೆನ್ನಾಗಿ ಕಾಣಿಸುತ್ತದೆ ಎಂದು ಭಾವಿಸುವವರು ಇದ್ದಾರೆ. ಹೀಗೆ ಬೆರಳ ಮೇಲೆ ಚುಚ್ಚಿಸಿಕೊಳ್ಳುವುದು ಸೌಂದರ್ಯ ಪ್ರಜ್ಞೆ ತೋರಿಸಿಕೊಳ್ಳುವ ಧ್ಯೋತಕವಂತೆ.

ನಾಲಗೆಗೆ ಸಂಕೇತ

ನಾಲಗೆ ಮೇಲೆ ಚುಚ್ಚಿಸಿಕೊಳ್ಳುವ ಪ್ರಕ್ರಿಯೆ ಸ್ವಲ್ಪ ನೋವಾಗುತ್ತದೆ. ಆದರೂ ಹಾಟ್ ಆಗಿ ಕಾಣಿಸುತ್ತೇವೆ ಎಂದು ಬಯಸಿ ನಾಲಗೆ ಚುಚ್ಚಿಸಿ ಸ್ಟಡ್ ಹಾಕಿಸಿಕೊಳ್ಳುವವರು ಹೆಚ್ಚಿದ್ದಾರೆ. ನಾಲಗೆ ಮೇಲೆ ಸಂಕೇತಗಳನ್ನು ಹಾಕಿಸಿಕೊಳ್ಳುವವರೇ ಬಹುಪಾಲು. ಸ್ವೇಚ್ಛೆ ಪ್ರದರ್ಶಿಸುವ ಶೈಲಿ ಇದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry