ಚಿತ್ರನಟ ಜೀತೇಂದ್ರ 47 ವರ್ಷದ ಹಿಂದೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ದೂರು ದಾಖಲಿಸಿದ ಸೋದರ ಸಂಬಂಧಿ ಮಹಿಳೆ

7

ಚಿತ್ರನಟ ಜೀತೇಂದ್ರ 47 ವರ್ಷದ ಹಿಂದೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ದೂರು ದಾಖಲಿಸಿದ ಸೋದರ ಸಂಬಂಧಿ ಮಹಿಳೆ

Published:
Updated:
ಚಿತ್ರನಟ ಜೀತೇಂದ್ರ 47 ವರ್ಷದ ಹಿಂದೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ದೂರು ದಾಖಲಿಸಿದ ಸೋದರ ಸಂಬಂಧಿ ಮಹಿಳೆ

ಶಿಮ್ಲಾ : ಇಲ್ಲಿನ ಹೊಟೆಲ್‌ ಒಂದರಲ್ಲಿ 47 ವರ್ಷಗಳ ಹಿಂದೆ ಉಳಿದುಕೊಂಡಿದ್ದಾಗ ಚಿತ್ರನಟ ಜೀತೇಂದ್ರ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಅವರ ಸೋದರ ಸಂಬಂಧಿ ಮಹಿಳೆಯೊಬ್ಬರು ಶಿಮ್ಲಾ ಪೊಲೀಸರಿಗೆ ದೂರು ನೀಡಿದ್ದಾರೆ.

ದೌರ್ಜನ್ಯ ನಡೆದಾಗ ತಮಗೆ 18 ವರ್ಷ ವಯಸ್ಸು. ಅಂದು ರವಿ ಕಪೂರ್‌ ಎಂದು ಗುರುತಿಸಿಕೊಳ್ಳುತ್ತಿದ್ದ 28 ವರ್ಷದ ಜೀತೇಂದ್ರ ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದರು ಎಂದು ಮಹಿಳೆಯು ಹಿಮಾಚಲ ಪ್ರದೇಶದ ಪೊಲೀಸ್‌ ಮಹಾನಿರ್ದೇಶಕರಿಗೆ ಇದೇ ವರ್ಷದ ಫೆಬ್ರುವರಿಯಲ್ಲಿ ಕಳುಹಿಸಿರುವ ಇ–ಮೇಲ್‌ನಲ್ಲಿ ಬರೆದಿದ್ದಾರೆ. 

ಈ ಇ–ಮೇಲ್‌ ಗಮನಿಸಿ, ದೂರುದಾರರನ್ನು ಸಂಪರ್ಕಿಸಿ ಲಿಖಿತ ಹೇಳಿಕೆ ಪಡೆಯುವ ಮೂಲಕ ಶಿಮ್ಲಾ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದಾರೆ. ಮಹಿಳೆಯು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. 47 ವರ್ಷಗಳ ಹಿಂದೆ ನಿರ್ದಿಷ್ಟ ದಿನದಂದು ದೌರ್ಜನ್ಯ ಎಸಗಿದ ವ್ಯಕ್ತಿಯೊಂದಿಗೆ ಹೊಟೆಲ್‌ನಲ್ಲಿ ಉಳಿದುಕೊಂಡಿರುವುದಕ್ಕೆ ಸಾಕ್ಷ್ಯ ನೀಡುವಂತೆ ಪೊಲೀಸರು ಕೋರಿದ್ದಾರೆ. 

  ‘ಇದೊಂದು ಆಧಾರವಿಲ್ಲದ ಮತ್ತು ಹಾಸ್ಯಾಸ್ಪದವಾದ ಆರೋಪವಾಗಿದೆ’ ಎಂದು ಜೀತೇಂದ್ರರ ವಕೀಲರು ಪ್ರತಿಕ್ರಿಯಿಸಿದ್ದಾರೆ.

ಶಿಮ್ಲಾದಲ್ಲಿ ನಡೆಯುತ್ತಿದ್ದ ಚಿತ್ರೀಕರಣದಲ್ಲಿ ಭಾಗವಹಿಸಲು ಜೀತೇಂದ್ರ ತಮ್ಮನ್ನು ದೆಹಲಿಯಿಂದ ಕರೆಸಿಕೊಂಡಿದ್ದರು. ಹೊಟೆಲ್‌ನಲ್ಲಿ ಉಳಿದುಕೊಂಡಿದ್ದಾಗ, ಕುಡಿದ ಅಮಲಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry