ಬದುಕಿಗೆ ಸ್ಫೂರ್ತಿ ನೀಡಿದ ಮಹಿಳೆ: ನನ್ನ ತಾಯಿ

7

ಬದುಕಿಗೆ ಸ್ಫೂರ್ತಿ ನೀಡಿದ ಮಹಿಳೆ: ನನ್ನ ತಾಯಿ

Published:
Updated:
ಬದುಕಿಗೆ ಸ್ಫೂರ್ತಿ ನೀಡಿದ ಮಹಿಳೆ: ನನ್ನ ತಾಯಿ

ಒಂದು ಮಗುವಿಗೆ ತಂದೆ ಇಲ್ಲದಿದ್ದರೂ ತಾಯಿ ಮಾತ್ರ ತುಂಬ ಅವಶ್ಯಕ ಏಕೆಂದರೆ ಒಬ್ಬ ತಾಯಿ ಒಂದು ಮಗುವಿಗೆ ತಂದೆ ಮತ್ತು ತಾಯಿ ಇಬ್ಬರ ಪ್ರೀತಿ ಕೊಡುವುದಲ್ಲದೆ ಆ ಮಗುವಿಗೆ ತಂದೆಯಾಗಿಯು ನಿಲ್ಲುವಳು,ಇದಕ್ಕೆ ಒಂದೂ ಒಳ್ಳೆಯ ಉದಾಹರಣೆ ನನ್ನ ತಾಯಿ.ತಾವುಗಳು ಶಿಕ್ಷಣದಿಂದ ವಂಚಿತರಾದಂತೆ ತಮ್ಮ ಮಕ್ಕಳು ವಂಚಿತರಾಗಬಾರದು ಎಂದು ಹಗಲು ಇರುಳು ಎನ್ನದೆ ವ್ಯವಸಾಯ ಮಾಡಿ ಮಕ್ಕಳನ್ನು ಉತ್ತಮ ವಿಧ್ಯಾಭ್ಯಾಸ ಕೊಡಿಸಬೇಕು ಎಂಬ ಆಸೆಯ ಬುತ್ತಿ ಹೊತ್ತಿದ್ದ ದಂಪತಿಗೆ ವಿಧಿ ಬೇರೆಯದ್ದೇ ಅಚ್ಚರಿ ಕೊಟ್ಟಿತು ಅದೇ ಸಣ್ಣ ವಯಸ್ಸಿನ್ನಲ್ಲೇ ನನ್ನ ತಂದೆಯ ಸಾವು.ಇದಾದ ಮೇಲೆ ನನಗೆ ಶಿಕ್ಷಣದ ಅವಶ್ಯಕತೆ ಇಲ್ಲಾ,ಓದುತ್ತಿರುವ ನನ್ನ ಅಕ್ಕ ಮತ್ತೂ ಅಣ್ಣ ಚನ್ನಾಗಿ ಓದಿದರೆ ಸಾಕು ನಾನು ಅಮ್ಮನಿಗೆ  ಸಹಾಯ ಮಾಡಲು ವ್ಯವಸಾಯಕ್ಕೆ ಇಳಿದೆ.

ನನ್ನ ಜೀವನ ವ್ಯವಸಾಯವೆ ಎಂದು ನಿರ್ಧರಿಸಿದೆ.ಆದರೆ ಪತಿಯ ಆಸೆಯನ್ನು ನಿರಾಸೆ ಮಾಡಲು ಇಷ್ಟವಿಲ್ಲದ ನನ್ನ ತಾಯಿ ನನ್ನನ್ನು ವ್ಯವಸಾಯಕ್ಕೆ ಇಳಿಸದೆ ಶಾಲೆಗೆ ಕಳಿಸಿದಳು. ಒಂದು ಹೆಣ್ಣಾಗಿ ಮೂವರು ಮಕ್ಕಳನ್ನ ವ್ಯವಸಾಯ ಮಾಡಿಕೊಂಡೆ ಓದಿಸಿದಳು.ನಮ್ಮ ಊರಿನ ಗಂಡಸರೆಲ್ಲಾ ರಂಟೆ, ಕುಂಟೆ,ನೇಗಿಲುಗಳನ್ನು ಎತ್ತಿನ ಮೇಲೆ ಗಳೇವು ಕಟ್ಟಿಕೊಂಡು ಹೊಲಕ್ಕೆ ಉಳುಮೆ ಮಾಡಲು ಹೋದರೇ ಅವರ ಹಾಗೇನೇ ನನ್ನ ತಾಯಿ ಕೂಡ ನನ್ನ ತಂದೆ ಬಿಟ್ಟು ಹೋಗಿದ್ದ ಎತ್ತುಗಳಿಗೆ ಗಳೇವು ಕಟ್ಟಿಕೊಂಡು ಒಂದಲ್ಲ ಎರಡಲ್ಲ ಎಂಟು ವರ್ಷಗಳ ಕಾಲ ಒಬ್ಬಂಟಿಯಾಗಿ ವ್ಯವಸಾಯ ಮಾಡಿ ಮೂವರು ಮಕ್ಕಳನ್ನು ಓದಿಸಿದಳು. 

ಮಳೆ ನೀರನ್ನೇ ಅವಲಂಬಿಸಿದ್ದ ಒಣ ಬೇಸಾಯದಲ್ಲಿ ವರ್ಷಕ್ಕೆ ಅಷ್ಟೋ ಇಷ್ಟೋ ಬೆಳೆ ಬರುತ್ತಿತ್ತು,ಅದರಲ್ಲಿ ತನಗೆ ಅಂತ ಒಂದೂ ತುಂಡು ಬಟ್ಟೆ ಕೂಡ ಖರಿದಿಸದೆ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಇಟ್ಟಳು.ನನ್ನ ಅಕ್ಕಳನ್ನು D.ed ಓದಿಸಿ ಒಂದೂ ರೂಪಾಯಿ ಸಾಲ ಮಾಡದೆ ಒಳ್ಳೇ ಕಡೆ ಮದುವೆ ಮಾಡಿಸಿದಳು.ನನ್ನ ಅಣ್ಣನಿಗೆ ಉತ್ತಮ ಶಿಕ್ಷಣ ಕೊಡಿಸಿ ಬೆಂಗಳೂರಿನಲ್ಲಿ ಅವನೇ ಸ್ವಂತ ಕಂಪೆನಿ ಸ್ಥಾಪಿಸಲು ನೆರವಾದಳು ಈಗ ಆ ಕಂಪೆನಿ 16 ಜನಕ್ಕೆ ಕೆಲಸ ಕೊಟ್ಟಿದೆ.ನಾನು M.tech ಮುಗಿಸಿ ಒಂದು engineering ಕಾಲೇಜ್ ಗೆ ಪ್ರೊಫೆಸ್ಸೇರ ಆಗಿದ್ದೇನೆ.ನಮ್ಮ ಈ ಎಲ್ಲಾ ಸಾಧನೆಗೆ ನನ್ನ ತಾಯಿ ನೇ ಕಾರಣ .ನನ್ನ ಬದುಕು ವ್ಯವಸಾಯಕ್ಕೆ ಸೀಮಿತ ಅಂಧೂಕೊಂಡಿದ್ದವನಿಗೆ ದಾರಿ ದೀಪ ತೋರಿಸಿದಳು ನನ್ನ ತಾಯಿ.ಇನ್ನು ಎಷ್ಟೇ ಜನ್ಮ ಬಂದರೂ ಅವಳ ಹೋಟ್ಟೇಯಲ್ಲೇ ನಾನು ಹುಟ್ಟಿ ಬರಬೇಕು ಇದೇ ನನ್ನ ಆಸೆ.ಕೇವಲ ಮಾರ್ಚ್ 8 ಅಸ್ಟೆ ಅಲ್ಲ ವರ್ಷದ 365 ದಿನಗಳೂ ಕೂಡ ನನ್ನ ತಾಯಿಗೆ ಮೀಸಲಿಡುವೇ.

-ಬಿ. ವೆಂಕಟೇಶ್ ನಾಯ್ಕ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry