ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 8-3-1968

Last Updated 7 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಸರ್ಕಾರಿ ಕಾಲೇಜು ಶಿಕ್ಷಕರಿಗೆ ಯು.ಜಿ.ಸಿ. ವೇತನಗಳಿಲ್ಲ
ಬೆಂಗಳೂರು, ಮಾ. 7–
ಯು.ಜಿ.ಸಿ.ವೇತನ ಸ್ಕೇಲುಗಳನ್ನು ಸರ್ಕಾರಿ ಕಾಲೇಜುಗಳ ಶಿಕ್ಷಕರಿಗೆ ಕೊಡುವುದಿಲ್ಲ ಎಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಶ್ರೀ ವೈ.ಎಸ್. ಪಾಟೀಲ್ ಅವರ ಪ್ರಶ್ನೆಗಳಿಗೆ ಉತ್ತರವಿತ್ತ ಶಿಕ್ಷಣ ಸಚಿವ ಶ್ರೀ ಶಂಕರಗೌಡ ಅವರು, ಎರಡನೆ ಮತ್ತು ಮೂರನೆ ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ಸರ್ಕಾರಿ ಕಾಲೇಜುಗಳಲ್ಲಿನ ವೇತನ ಸ್ಕೇಲುಗಳನ್ನು ಉತ್ತಮಪಡಿಸಲಾಗಿದೆ ಎಂದರು.

ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಶಿಕ್ಷಕರ ವೇತನ ಸ್ಕೇಲುಗಳನ್ನು ಯು.ಜಿ.ಸಿ.ಯೇ ನಿಗದಿ ಮಾಡಿದೆ ಎಂದು ಸಚಿವರು ಶ್ರೀ ಮಲ್ಲಾರಾಧ್ಯ ಅವರಿಗೆ ತಿಳಿಸಿದರು.

ಯು.ಜಿ.ಸಿ.ಯೇ ಶಿಕ್ಷಕರ ಸ್ಕೇಲುಗಳ ಬಗ್ಗೆ ಮೂಲಾಗ್ರವಾಗಿ ಪರಿಶೀಲಿಸಿ ವರದಿ ನೀಡಿದೆ ಎಂದು ಸಚಿವರು ಹೇಳಿದರು.

‘ರಾಮದಂಡು’
ಹೈದರಾಬಾದ್, ಮಾ. 7–
ರಾಜ್ಯದಲ್ಲಿನ ಕೇಂದ್ರಾಡಳಿತದಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಸಾಕಷ್ಟು ಅವಕಾಶ ನೀಡದಿದ್ದ ಪಕ್ಷದಲ್ಲಿ ಶಿವಸೇನಾ ಮತ್ತು ಇತರ ಸೇನೆಗಳ ಮಾದರಿಯಲ್ಲಿ ‘ರಾಮದಂಡು’ ರಚಿಸಬೇಕಾಗುವುದೆಂದು ರಿಪಬ್ಲಿಕನ್ ಪಕ್ಷದ ನಾಯಕಿ ಶ್ರೀಮತಿ ಜೆ. ಈಶ್ವರಿಬಾಯ್ ಅವರು ಕೇಂದ್ರಕ್ಕೆ ಎಚ್ಚರಿಕೆ ನೀಡಿದರು.

ಶ್ರೀಮತಿ ಈಶ್ವರಿಬಾಯ್ ಅವರು ಅಂಧ್ರ ಪ್ರದೇಶ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಬೇಡಿಕೆ ಬಗ್ಗೆ ಮಾತನಾಡುತ್ತಾ, ರಾಜ್ಯದಲ್ಲಿರುವ ಕೇಂದ್ರದ ಕೈಗಾರಿಕೆಗಳು ಎಲ್ಲಾ ಮಟ್ಟಗಳಲ್ಲಿ ಅಂಧ್ರದಲ್ಲದವರಿಗೆ ಉತ್ಪಾದನಾ ಕೇಂದ್ರಗಳಾಗಿವೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT