ಹಾಕಿ: ಭಾರತಕ್ಕೆ ಜಯ

ಮಂಗಳವಾರ, ಮಾರ್ಚ್ 19, 2019
28 °C

ಹಾಕಿ: ಭಾರತಕ್ಕೆ ಜಯ

Published:
Updated:
ಹಾಕಿ: ಭಾರತಕ್ಕೆ ಜಯ

ಇಪೋ, ಮಲೇಷ್ಯಾ: ಅತ್ಯುತ್ತಮ ಸಾಮರ್ಥ್ಯ ತೋರಿದ ಭಾರತ ಪುರುಷರ ಹಾಕಿ ತಂಡ ಅಜ್ಲನ್ ಷಾ ಕಪ್ ಹಾಕಿ ಟೂರ್ನಿಯಲ್ಲಿ ಬುಧವಾರ 5–1ಗೋಲುಗಳಿಂದ ಮಲೇಷ್ಯಾವನ್ನು ಮಣಿಸಿದೆ.

ಭಾರತದ ಶಿಲಾನಂದ್ ಲಾಕ್ರಾ (10ನೇ ನಿ), ಗುರ್ಜಂತ್ ಸಿಂಗ್‌ (42, 57ನೇ ನಿ.), ಸುಮಿತ್ ಕುಆರ್‌ (48ನೇ ನಿಮಿಷ) ಮತ್ತು ರಮಣ್‌ದೀಪ್‌ ಸಿಂಗ್‌ (51ನೇ ನಿ) ಭಾರತದ ಪರ ಗೋಲು ಗಳಿಸಿದರು. ಫೈಸಲ್ ಸಾರಿ (33ನೇ ನಿ) ಮಲೇಷ್ಯಾ ಪರ ಏಕೈಕ ಗೋಲು ಹೊಡೆದರು.

ಈ ಜಯದೊಂದಿಗೆ ಟೂರ್ನಿಯಲ್ಲಿ ಮೊದಲ ಬಾರಿ ಪೂರ್ಣ ಪಾಯಿಂಟ್ ಗಳಿಸಿದ ಭಾರತ ಫೈನಲ್‌ ಪ್ರವೇಶದ ಕನಸನ್ನು ಜೀವಂತವಾಗಿರಿಸಿತು. ಶುಕ್ರವಾರ ನಡೆಯಲಿರುವ ರೌಂಡ್‌ ರಾಬಿನ್ ಹಂತದ ಕೊನೆಯ ಪಂದ್ಯಗಳ ಫಲಿತಾಂಶದ ಮೇಲೆ ಭಾರತದ ಭವಿಷ್ಯ ನಿಂತಿದೆ.

ಆಸ್ಟ್ರೇಲಿಯಾ ಈ ವರೆಗೆ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry