25ರಿಂದ ಮಹಿಳೆಯರ ಫುಟ್‌ಬಾಲ್‌ ಲೀಗ್‌

7

25ರಿಂದ ಮಹಿಳೆಯರ ಫುಟ್‌ಬಾಲ್‌ ಲೀಗ್‌

Published:
Updated:

ನವದೆಹಲಿ: ಎರಡನೇ ಆವೃತ್ತಿಯ ಹೀರೊ ಇಂಡಿಯನ್ ವುಮೆನ್ಸ್‌ ಲೀಗ್‌ (ಐಡಬ್ಲ್ಯುಎಲ್‌) ಮಾರ್ಚ್‌ 25ರಿಂದ ಶಿಲ್ಲಾಂಗ್‌ನಲ್ಲಿ ಆರಂಭವಾಗಲಿದೆ.

ಮೊದಲ ದಿನ ಹಾಲಿ ಚಾಂಪಿಯನ್ ಈಸ್ಟರ್ನ್‌ ಸ್ಪೋರ್ಟಿಂಗ್ ಯೂನಿಯನ್ ಮತ್ತು ಇಂದಿರಾ ಗಾಂಧಿ ಅಕಾಡೆಮಿ ಫಾರ್ ಸ್ಪೋರ್ಟ್ಸ್‌ ಎಜುಕೇಷನ್ ತಂಡಗಳು ಪೈಪೋಟಿ ನಡೆಸಲಿವೆ.

ಟೂರ್ನಿಯಲ್ಲಿ ಒಟ್ಟು ಏಳು ತಂಡಗಳು ಹಣಾಹಣಿ ನಡೆಸಲಿವೆ. ಎಲ್ಲಾ ತಂಡಗಳು ಲೀಗ್ ಹಂತದಲ್ಲಿ ಮುಖಾಮುಖಿಯಾಗಲಿವೆ.

ಅಗ್ರಸ್ಥಾನ ಪಡೆದ ನಾಲ್ಕು ತಂಡಗಳು ಸೆಮಿಫೈನಲ್‌ ಆಡಲಿವೆ. ಏಪ್ರಿಲ್‌ 12ರಂದು ಸೆಮಿಫೈನಲ್‌ ಹಾಗೂ ಎಪ್ರಿಲ್‌ 15ರಂದು ಫೈನಲ್ ಪಂದ್ಯ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry