ಹಾಕಿ: ಪಾಕಿಸ್ತಾನ ತಂಡಕ್ಕೆ ಓಲ್ಟಮನ್ಸ್‌ ಕೋಚ್‌

7

ಹಾಕಿ: ಪಾಕಿಸ್ತಾನ ತಂಡಕ್ಕೆ ಓಲ್ಟಮನ್ಸ್‌ ಕೋಚ್‌

Published:
Updated:
ಹಾಕಿ: ಪಾಕಿಸ್ತಾನ ತಂಡಕ್ಕೆ ಓಲ್ಟಮನ್ಸ್‌ ಕೋಚ್‌

ನವದೆಹಲಿ: ನೆದರ್ಲೆಂಡ್ಸ್‌ನ ಹಿರಿಯ ಆಟಗಾರ ರೋಲಂಟ್ ಓಲ್ಟಮನ್ಸ್‌ ಅವರು ಪಾಕಿಸ್ತಾನ ಪುರುಷರ ಹಾಕಿ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದು ಖಚಿತವಾಗಿದೆ.

ಎರಡೂವರೆ ವರ್ಷಗಳ ಕಾಲ ಪಾಕ್ ತಂಡದ ಕೋಚ್ ಆಗಿ ಕೆಲಸ ಮಾಡುವುದಾಗಿ ಓಲ್ಟಮನ್ಸ್‌ ಟ್ವೀಟ್ ಮಾಡಿದ್ದಾರೆ.

ನಾಲ್ಕು ವರ್ಷ ಅವರು ಭಾರತ ತಂಡದ ಕೋಚ್ ಆಗಿದ್ದರು. ಮೊದಲು ತಂಡದ ನಿರ್ದೇಶಕರಾಗಿದ್ದರು. ಬಳಿಕ 2015ರಿಂದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. 2017ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಅವರನ್ನು ಕೋಚ್ ಹುದ್ದೆಯಿಂದ ತೆಗೆದುಹಾಕಲಾಗಿತ್ತು.

ಪಾಕಿಸ್ತಾನ ಹಾಕಿ ಫೆಡರೇಷನ್‌ (ಪಿಎಚ್‌ಎಫ್‌) ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry