ಎಡ್‌ ಕೋವನ್ ವಿದಾಯ

7

ಎಡ್‌ ಕೋವನ್ ವಿದಾಯ

Published:
Updated:
ಎಡ್‌ ಕೋವನ್ ವಿದಾಯ

ಸಿಡ್ನಿ: ಆಸ್ಟ್ರೇಲಿಯಾದ ಹಿರಿಯ ಟೆಸ್ಟ್‌ ಆಟಗಾರ ಎಡ್‌ ಕೋವನ್‌ ಬುಧವಾರ ಅಂತರರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್‌ ಮತ್ತು ಲೆಗ್‌ ಸ್ಪಿನ್ನರ್‌ ಆಗಿದ್ದ 35 ವರ್ಷದ ಕೋವನ್‌, 2011ರಲ್ಲಿ ಭಾರತದ ವಿರುದ್ಧ ಮೊದಲ ಟೆಸ್ಟ್‌ ಆಡಿದ್ದರು. 2013ರ ನಂತರ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ.

‘ಆಸ್ಟ್ರೇಲಿಯಾ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ತಂಡದಲ್ಲಿ ಸಹಆಟಗಾರರೊಂದಿಗೆ ಕಳೆದ ಸಮಯ ಸದಾ ನೆನಪಿನಲ್ಲಿ ಉಳಿಯುವಂತಹವು. ಇನ್ನು ಮುಂದೆ ಸಿಡ್ನಿ ವಿಶ್ವವಿದ್ಯಾಲಯದ ಪರ ಪ್ರೀಮಿಯರ್‌ ಕ್ರಿಕೆಟ್‌ ಆಡುತ್ತೇನೆ’ ಎಂದು ಕೋವನ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry