‘ರಕ್ತಾಭಿಷೇಕಕ್ಕೆ ಅವಕಾಶವಿಲ್ಲ’

7

‘ರಕ್ತಾಭಿಷೇಕಕ್ಕೆ ಅವಕಾಶವಿಲ್ಲ’

Published:
Updated:

ತಿರುವನಂತಪುರ: ಜಿಲ್ಲೆಯ ವಿಥುರಾದಲ್ಲಿನ ಕಾಳಿ ದೇವಿಗೆ ರಕ್ತದಿಂದ ಅಭಿಷೇಕ ನಡೆಸುವ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ.

‘ಕಾಳಿಯೂಟ್ಟು’ ಹಬ್ಬದ ಅಂಗವಾಗಿ ಮಾರ್ಚ್‌ 12ರಿಂದ 23ರವರೆಗೆ ಭಕ್ತಾದಿಗಳಿಂದ ರಕ್ತ ಸಂಗ್ರಹಿಸಿ ಕಾಳಿ ದೇವಿಗೆ ಅಭಿಷೇಕ ನಡೆಸುವುದಾಗಿ ದೇವಿಯೊಡೆ ಶ್ರೀವಿದ್ವಾರಿ ವೈದ್ಯನಾಥ ದೇವಾಲಯದ ಆಡಳಿತ ಮಂಡಳಿ ತಿಳಿಸಿತ್ತು.

ಹಬ್ಬದಲ್ಲಿ ಆಯೋಜಿಸುವ ವಿವಿಧ ಕಾರ್ಯಕ್ರಮಗಳ ವೇಳಾಪಟ್ಟಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹಲವು ದಿನಗಳಿಂದ ಹರಿದಾಡುತ್ತಿದೆ. ಹೀಗಾಗಿ, ರಾಜ್ಯದಲ್ಲಿ ರಕ್ತಾಭಿಷೇಕ ವಿಷಯ ಚರ್ಚೆಗೆ ಗ್ರಾಸವಾಗಿದೆ.

ರಕ್ತಾಭಿಷೇಕ ನಡೆಯದಂತೆ ಕ್ರಮಕೈಗೊಳ್ಳಲು ಮುಜುರಾಯಿ ಸಚಿವ ಕದಕಂಪಲ್ಲಿ ಸುರೆಂದ್ರನ್‌ ಅವರು ಜಿಲ್ಲಾಧಿಕಾರಿ ಮತ್ತು ತಿರುವನಂತಪುರ ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry