ರೋಹಿಣಿ ಸಿಂಧೂರಿ ಮತ್ತೆ ವರ್ಗಾವಣೆ

ಗುರುವಾರ , ಮಾರ್ಚ್ 21, 2019
27 °C

ರೋಹಿಣಿ ಸಿಂಧೂರಿ ಮತ್ತೆ ವರ್ಗಾವಣೆ

Published:
Updated:
ರೋಹಿಣಿ ಸಿಂಧೂರಿ ಮತ್ತೆ ವರ್ಗಾವಣೆ

ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಆದೇಶವನ್ನು ಮಂಗಳವಾರ ಹಿಂದಕ್ಕೆ ಪಡೆದಿದ್ದ ರಾಜ್ಯ ಸರ್ಕಾರ ಬುಧವಾರ ಮತ್ತೆ ವರ್ಗಾವಣೆ ಮಾಡಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ (ಜ.22) ರೋಹಿಣಿ ಅವರನ್ನು ಹಠಾತ್‌ ವರ್ಗಾವಣೆ ಮಾಡಿದ್ದ ಸರ್ಕಾರದ ಆದೇಶಕ್ಕೆ ಕೇಂದ್ರ ಚುನಾವಣಾ ಆಯೋಗ ತಡೆ ನೀಡಿತ್ತು. ಸರ್ಕಾರದ ಕ್ರಮಕ್ಕೆ ಸಾರ್ವಜನಿಕ ವಲಯದಿಂದಲೂ ಟೀಕೆ ಕೇಳಿ ಬಂದಿತ್ತು.

ಒಟ್ಟು 12 ಐಎಎಸ್‌ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದ್ದು ರೋಹಿಣಿ ಅವರನ್ನು ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತರನ್ನಾಗಿ ನೇಮಿಸಲಾಗಿದೆ.

ರಂದೀಪ್‌ ಪಿ– ಜಿಲ್ಲಾಧಿಕಾರಿ ಹಾಸನ, ಕಾವೇರಿ ಬಿ.ಬಿ– ಜಿಲ್ಲಾಧಿಕಾರಿ ಚಾಮರಾಜನಗರ,  ಶೆಟ್ಟಣ್ಣವರ್‌ ಎಸ್‌.ಬಿ– ಜಿಲ್ಲಾಧಿಕಾರಿ ವಿಜಯಪುರ, ಶಿವಕುಮಾರ್‌ ಕೆ.ಬಿ– ಜಿಲ್ಲಾಧಿಕಾರಿ ಮೈಸೂರು, ರಾಮು ಬಿ– ಆಯುಕ್ತರು ಪಶುಸಂಗೋಪನೆ ಇಲಾಖೆ, ಕ್ಯಾಪ್ಟನ್‌ ಕೆ.ರಾಜೇಂದ್ರ– ಜಿಲ್ಲಾಧಿಕಾರಿ ರಾಮನಗರ, ಬಿ.ಆರ್‌.ಮಮತಾ– ವ್ಯವಸ್ಥಾಪಕ ನಿರ್ದೇಶಕರು ಕೆಎಸ್‌ಡಿಎಲ್‌, ಎನ್‌. ಶಿವಶಂಕರ್‌– ಆಯುಕ್ತರು ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ, ಅರುಂಧತಿ ಚಂದ್ರಶೇಖರ್‌– ಆಯುಕ್ತರು ಆಹಾರ ಇಲಾಖೆ, ಆರ್‌. ಲತಾ– ಸಿಇಒ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌, ದಯಾನಂದ ಕೆ– ಜಿಲ್ಲಾಧಿಕಾರಿ ಬೆಂಗಳೂರು ನಗರ ಜಿಲ್ಲೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry