ದೇವರಾಜು ಅರಸು ನಿಗಮ 92 ಸಾವಿರ ಮಂದಿಗೆ ನೆರವು

7

ದೇವರಾಜು ಅರಸು ನಿಗಮ 92 ಸಾವಿರ ಮಂದಿಗೆ ನೆರವು

Published:
Updated:
ದೇವರಾಜು ಅರಸು ನಿಗಮ 92 ಸಾವಿರ ಮಂದಿಗೆ ನೆರವು

ಬೆಂಗಳೂರು: ದೇವರಾಜು ಅರಸು ನಿಗಮದ ಸ್ವ–ಉದ್ಯೋಗ, ಕಿರುಸಾಲ ಹಾಗೂ ವೃತ್ತಿದಾರರಿಗೆ ಸಾಲ ಯೋಜನೆಗಳ ಸೌಲಭ್ಯವನ್ನು 92,686 ಫಲಾನುಭವಿಗಳು ಪಡೆದಿದ್ದಾರೆ ಎಂದು ನಿಗಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.  

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಸಮುದಾಯಗಳಿಗೆ ಈಸೌಲಭ್ಯಗಳನ್ನು ಒದಗಿಸಲಾಗಿದೆ. 90 ಸಾವಿರ ಮಂದಿಗೆ ಸ್ವ–ಉದ್ಯೋಗ ತರಬೇತಿ ನೀಡಲಾಗಿದೆ. ಕುರಿ ಸಾಕಣೆ ನಡೆಸಲು ಹಾಗೂ ಹೈನುಗಾರಿಕೆ ಪ್ರಾರಂಭಿಸಲು 85,830 ಮಂದಿಗೆ ನೇರ ಸಾಲ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ನಿಗಮದ ಅಧ್ಯಕ್ಷ ಜೆ. ಹುಚ್ಚಪ್ಪ ವಿವರಿಸಿದ್ದಾರೆ.

ಗಂಗಾ ಕಲ್ಯಾಣ ಯೋಜನೆಯಡಿ 6,856 ಫಲಾನುಭವಿಗಳು ನೆರವು ಪಡೆದಿದ್ದಾರೆ. 70 ಮಹಿಳಾ ಗುಂಪುಗಳಿಗೆ ₹2 ಲಕ್ಷದಿಂದ ₹3 ಲಕ್ಷ ಸಾಲ ಸೌಲಭ್ಯ ನೀಡಲಾಗಿದೆ. ಈ ಗುಂಪುಗಳು ಹೋಳಿಗೆ ತಯಾರಿಕೆ, ಬೀಡಿ ಕಟ್ಟುವ.. ಹೀಗೆ ವಿವಿಧ ಗುಡಿಕೈಗಾರಿಕೆಗಳನ್ನು ನಡೆಸುತ್ತಿವೆ. ಪ್ರತಿಭಾವಂತ 80 ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡುವ ಅವಕಾಶವನ್ನು ನಿಗಮ ಕಲ್ಪಿಸಿದೆ ಎಂದಿದ್ದಾರೆ.

ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿದ್ದಕ್ಕಾಗಿ ರಾಷ್ಟ್ರೀಯ ಹಿಂದುಳಿದ ಅಭಿವೃದ್ಧಿ ನಿಗಮದ ವತಿಯಿಂದ ಎರಡು ಬಾರಿ ₹10 ಲಕ್ಷ ನಗದು ಬಹುಮಾನ ದೊರೆತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry