ಹುಬ್ಬಳ್ಳಿ–ಧಾರವಾಡ ರೈಲಿಗೆ ಮಹಿಳಾ ಸಿಬ್ಬಂದಿ ಸಾರಥ್ಯ

7

ಹುಬ್ಬಳ್ಳಿ–ಧಾರವಾಡ ರೈಲಿಗೆ ಮಹಿಳಾ ಸಿಬ್ಬಂದಿ ಸಾರಥ್ಯ

Published:
Updated:
ಹುಬ್ಬಳ್ಳಿ–ಧಾರವಾಡ ರೈಲಿಗೆ ಮಹಿಳಾ ಸಿಬ್ಬಂದಿ ಸಾರಥ್ಯ

ಧಾರವಾಡ: ಹುಬ್ಬಳ್ಳಿ-ಧಾರವಾಡ 56902 ರೈಲನ್ನು ಸಂಪೂರ್ಣ ಮಹಿಳಾ ಸಿಬ್ಬಂದಿ ನಿರ್ವಹಿಸುವ ಮೂಲಕ ರೈಲ್ವೆ ಸಿಬ್ಬಂದಿ ‘ಮಹಿಳಾ ದಿನಾಚರಣೆ’ ಆಚರಿಸಿದರು.

(ಡಿ.ಸಂಗೀತ ಲೋಕೋ ಪೈಲೆಟ್ ಆಗಿ ಎಂಜಿನ್ ಚಾಲನೆ ಮಾಡಿದರು. 8.40ಕ್ಕೆ ಸಮಯ ನಿಗಡಿಯಾಗಿತ್ತು. ಆದರೆ ಕಾರ್ಯಕ್ರಮ ಹುನ್ನೆಲೆಯಲ್ಲಿ 8.51ಕ್ಕೆ ರೈಲು ಹುಬ್ಬಳ್ಳಿಯ ಕಡೆ ಪ್ರಯಾಣ ಬೆಳಸಿತು)

ಗೇಟ್ ವುಮನ್‌ನಿಂದ ಸಹಾಯಕ ವಾಣಿಜ್ಯ ಅಧಿಕಾರಿವರೆಗೂ 25 ಮಹಿಳಾ ಸಿಬ್ಬಂದಿ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು. ರೈಲ್ವೆ ನಿಲ್ದಾಣದಲ್ಲಿ ಸಂಭ್ರಮ ಮನೆ ಮಾಡಿತ್ತು.

ಮುಂಬೈನ ಮತುಂಗ ರೈಲ್ವೆ ನಿಲ್ದಾಣವನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಅದರಿಂದ ಪ್ರೇರಣೆ ಪಡೆದು ನೈರುತ್ಯ ರೈಲ್ವೆ ವಲಯದ ಧಾರವಾಡ ನಿಲ್ದಾಣದಲ್ಲಿ ಈ ಪ್ರಯತ್ನ ಮಾಡಲಾಗಿದೆ. ಮುಂದೆಯೂ ಈ ನಿಲ್ದಾಣವನ್ನು ಸಂಪೂರ್ಣ ಮಹಿಳಾ ಸಿಬ್ಬಂದಿಯಿಂದಲೇ ನಿರ್ವಹಿಸುವ ನಿಲ್ದಾಣವನ್ನಾಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಹಾಯಕ ವಾಣಿಜ್ಯ ಅಧಿಕಾರಿ ಪ್ರಿಯಾ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry