ಮಂಗಳೂರು: ಮೇಯರ್ ಆಗಿ‌ ಭಾಸ್ಕರ್ ಮೊಯಿಲಿ‌ ಆಯ್ಕೆ

7

ಮಂಗಳೂರು: ಮೇಯರ್ ಆಗಿ‌ ಭಾಸ್ಕರ್ ಮೊಯಿಲಿ‌ ಆಯ್ಕೆ

Published:
Updated:
ಮಂಗಳೂರು: ಮೇಯರ್ ಆಗಿ‌ ಭಾಸ್ಕರ್ ಮೊಯಿಲಿ‌ ಆಯ್ಕೆ

ಮಂಗಳೂರು: ಮೇಯರ್ ಆಗಿ ಕಾಂಗ್ರೆಸ್‌ನ ಹಿರಿಯ ಸದಸ್ಯ ಭಾಸ್ಕರ್ ಮೊಯಿಲಿ ಹಾಗೂ ಉಪಮೇಯರ್ ಆಗಿ ಮುಹಮ್ಮದ್ ಕುಂಜತ್ತಬೈಲ್ ಆಯ್ಕೆಯಾಗಿದ್ದಾರೆ.

ಗುರುವಾರ ನಗರ ಪಾಲಿಕೆ ಸಭಾಂಗಣದಲ್ಲಿ ಚುನಾವಣಾ ಅಧಿಕಾರಿಯಾಗಿದ್ದ ಮೈಸೂರು ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಈ ಆಯ್ಕೆಯನ್ನು ಘೋಷಿಸಿದರು.

ಈ ಮೊದಲು‌ ಮೇಯರ್ ಸ್ಥಾನವನ್ನು ಮುಸ್ಲಿಮರಿಗೆ ನೀಡುವಂತೆ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರು ಒತ್ತಾಯಿಸಿದ್ದರು. ಗುರುವಾರ ಬೆಳಿಗ್ಗೆ ಸಚಿವ ಬಿ.‌ರಮಾನಾಥ ರೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ‌ ಮೇಯರ್ ಮತ್ತು ಉಪಮೇಯರ್ ಸ್ಥಾನದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿತ್ತು.

ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಭಾಸ್ಕರ್ ಮೊಯಿಲಿ ಮತ್ತು ಬಿಜೆಪಿಯಿಂದ ಸುರೇಂದ್ರ ಶೆಟ್ಟಿ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ನ ಭಾಸ್ಕರ್ ಮೊಯಿಲಿ ಪರ 37, ಬಿಜೆಪಿಯ ಸುರೇಂದ್ರ ಶೆಟ್ಟಿ ಪರ 19 ಮತ ಚಲಾವಣೆಯಾದವು.

(ಮಹಮ್ಮದ್ ಕುಂಜತ್ತಬೈಲ್)

ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಮಹಮ್ಮದ್ ಕುಂಜತ್ತಬೈಲ್ ಪರ 37,  ಬಿಜೆಪಿಯ ಮೀರಾ ಕರ್ಕೇರ ಪರ 19 ಮತ ಬಿದ್ದವು.

ಪಾಲಿಕೆಯಲ್ಲಿ ಕಾಂಗ್ರೆಸ್ 35 ಸದಸ್ಯರನ್ನು ಹೊಂದಿದ್ದು, ಶಾಸಕ ಜೆ.ಆರ್. ಲೋಬೊ, ವಿಧಾನ ಪರಿಷತ್‌ನ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್ ಡಿಸೋಜ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಚಲಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry