ಚಿಕಿತ್ಸೆ ಸಿಗದೇ ಜಾನುವಾರು ಸಾವು: ಡಿ.ರಾಂಪುರ ಪಶು ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ

7

ಚಿಕಿತ್ಸೆ ಸಿಗದೇ ಜಾನುವಾರು ಸಾವು: ಡಿ.ರಾಂಪುರ ಪಶು ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ

Published:
Updated:
ಚಿಕಿತ್ಸೆ ಸಿಗದೇ ಜಾನುವಾರು ಸಾವು: ಡಿ.ರಾಂಪುರ ಪಶು ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ

ಶಕ್ತಿನಗರ: ಸಮೀಪದ ಡಿ.ರಾಂಪುರ ಪಶು ಕೇಂದ್ರದಲ್ಲಿ ಪಶುವೈದ್ಯರು ಸರಿಯಾದ ಸಮಯಕ್ಕೆ ಕಾರ್ಯನಿರ್ವಹಿಸುತ್ತಿಲ್ಲ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೊರ್ತಕುಂದಾ ರೈತರಾದ ತಿಮ್ಮಪ್ಪ ಹಾಗೂ ರವಿ ಒತ್ತಾಯಿಸಿದ್ದಾರೆ.

ಡಿ.ರಾಂಪುರ ವ್ಯಾಪ್ತಿಯ ಕೊರ್ತಕುಂದಾ ಗ್ರಾಮದ ಜಾನುವಾರುಗಳಿಗೆ ಸಮರ್ಪಕವಾಗಿ ಚಿಕಿತ್ಸೆ ದೊರೆಯದ ಪರಿಸ್ಥಿತಿ ಉದ್ಭವಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಸವ ವೇದನೆಯಿಂದ ಬಳಲುತ್ತಿದ್ದ ಎಮ್ಮೆಯೊಂದನ್ನು ಮಂಗಳವಾರ ಪಶು ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದಾಗ, ವೈದ್ಯರು ಆಸ್ಪತ್ರೆಯಲ್ಲಿ ಇರಲಿಲ್ಲ. ವೈದ್ಯರು ಮೊಬೈಲ್‌ ಸಂಪರ್ಕಕ್ಕೂ ಸಿಗಲಿಲ್ಲ. ಹೀಗಾಗಿ ರಾಯಚೂರು ಪಶು ಕೇಂದ್ರಕ್ಕೆ ತೆಗೆದುಕೊಂಡು ಹೋದಾಗ, ಎಮ್ಮೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು. ಆಸ್ಪತ್ರೆಯಲ್ಲಿ ಸರಿಯಾಗಿ ಕೆಲಸ ನಿರ್ವಹಿಸದ ಡಿ. ರಾಂಪುರ ಪಶುವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry