ಇಂದಿರಾ ಕ್ಯಾಂಟೀನ್‌ಗೆ ಹಾನಿ

7

ಇಂದಿರಾ ಕ್ಯಾಂಟೀನ್‌ಗೆ ಹಾನಿ

Published:
Updated:

ಮಂಗಳೂರು: ನಗರದ ಪುರಭವನದ ಪಕ್ಕದಲ್ಲಿ ಮಂಗಳವಾರವಷ್ಟೇ ಉದ್ಘಾ ಟನೆಗೊಂಡಿರುವ ಇಂದಿರಾ ಕ್ಯಾಂಟೀನ್‌ ಕಟ್ಟಡಕ್ಕೆ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಗ್ರಾಹಕರು ಕೈ ತೊಳೆಯುವ ಸ್ಥಳದಲ್ಲಿ ಒಂದು ನಲ್ಲಿಯನ್ನು ತುಂಡರಿಸಲಾಗಿದೆ. ಶೌಚಾಲಯದ ಬಾಗಿಲಿಗೂ ಹಾನಿ ಮಾಡಲಾಗಿದೆ. ಬುಧವಾರ ಬೆಳಿಗ್ಗೆ ಸಿಬ್ಬಂದಿ ಬಂದಾಗ ದುಷ್ಕೃತ್ಯ ನಡೆದಿರು ವುದು ಗೊತ್ತಾಗಿದೆ.

ಇಂದಿರಾ ಕ್ಯಾಂಟೀನ್‌ ನಿರ್ವಹಣೆಯ ಹೊಣೆ ಹೊತ್ತಿರುವ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಗಳವಾರ ತಡರಾತ್ರಿಯ ಬಳಿಕ ಕೃತ್ಯ ಎಸಗಿರುವ ಶಂಕೆ ಇದೆ. ಘಟನೆಗೆ ಸಂಬಂಧಿಸಿದಂತೆ ಈವರೆಗೂ ಪೊಲೀಸ್‌ ಠಾಣೆಗೆ ದೂರು ನೀಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry