ನಾಗಾಲ್ಯಾಂಡ್‌ನ ಮುಖ್ಯಮಂತ್ರಿಯಾಗಿ ನೆಫಿಯು ರಿಯೊ ಪ್ರಮಾಣ ವಚನ ಸ್ವೀಕಾರ

ಸೋಮವಾರ, ಮಾರ್ಚ್ 25, 2019
33 °C

ನಾಗಾಲ್ಯಾಂಡ್‌ನ ಮುಖ್ಯಮಂತ್ರಿಯಾಗಿ ನೆಫಿಯು ರಿಯೊ ಪ್ರಮಾಣ ವಚನ ಸ್ವೀಕಾರ

Published:
Updated:
ನಾಗಾಲ್ಯಾಂಡ್‌ನ ಮುಖ್ಯಮಂತ್ರಿಯಾಗಿ ನೆಫಿಯು ರಿಯೊ ಪ್ರಮಾಣ ವಚನ ಸ್ವೀಕಾರ

ಕೊಹಿಮಾ : 18 ಶಾಸಕರನ್ನು ಹೊಂದಿರುವ ನ್ಯಾಷನಲಿಸ್ಟ್‌ ಡೆಮಾಕ್ರಟಿಕ್‌ ಪೀಪಲ್ಸ್‌ ಪಾರ್ಟಿ (ಎನ್‌ಡಿಪಿಪಿ) ಮುಖ್ಯಸ್ಥ ನೆಫಿಯು ರಿಯೊ ಅವರು ನಾಗಾಲ್ಯಾಂಡ್‌ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು.

ಬಿಜೆಪಿಯ 12 ಶಾಸಕರು, ಜೆಡಿಯುನ ಒಬ್ಬ ಮತ್ತು ಒಬ್ಬ ಪಕ್ಷೇತರ ಶಾಸಕ ರಿಯೊ ಅವರನ್ನು ಬೆಂಬಲಿಸಿರುವುದರಿಂದ ಸರ್ಕಾರ ರಚನೆಯಾಗಿದೆ. ಬಿಜೆಪಿಯ ವೈ.ಪತ್ತೊನ್‌ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಈ ಹೊಸ ಒಕ್ಕೂಟವನ್ನು ‘ಪೀಪಲ್ಸ್‌ ಡೆಮಕ್ರಟಿಕ್‌ ಅಲಯನ್ಸ್‌’ (ಪಿಡಿಎ) ಎಂದು ಕರೆಯುವುದಾಗಿ ನೂತನ ಮುಖ್ಯಮಂತ್ರಿ ರಿಯೊ ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಕಿರಣ್‌ ರಿಜಿಜು ಮತ್ತು ಮೇಘಾಲಯದ ನೂತನ ಮುಖ್ಯಮಂತ್ರಿ ಕಾನ್ರಾಡ್‌ ಸಾಂಗ್ಮಾ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಾಜರಿದ್ದರು.

ನಾಗಾಲ್ಯಾಂಡ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಎಫ್‌) ರಾಜ್ಯ ಚುನಾವಣೆಯ 59 ಸ್ಥಾನಗಳಲ್ಲಿ 27 ಸ್ಥಾನಗಳಲ್ಲಿ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಸರ್ಕಾರ ರಚನೆಗೆ ಬೇಕಾದ ಬಹುಮತ ಸಾಬೀತು ಪಡಿಸಲು ಆಗಿರಲಿಲ್ಲ. ಹಾಗಾಗಿ ಎನ್‌ಪಿಎಫ್‌ ಪ್ರತಿನಿಧಿಸುವ ಈ ಹಿಂದಿನ ಮುಖ್ಯಮಂತ್ರಿ ಟಿ.ಆರ್‌.ಜೆಲಿಯಾಂಗ್‌ ಮಂಗಳವಾರ ರಾಜೀನಾಮೆ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry