ಮಹಿಳಾ ದಿನ ಕಾರ್ಯಕ್ರಮ: ಮಕ್ಕಳೊಂದಿಗೆ ಸಂಭ್ರಮಿಸಿದ ಪ್ರಧಾನಿ ಮೋದಿ

ಶುಕ್ರವಾರ, ಮಾರ್ಚ್ 22, 2019
21 °C

ಮಹಿಳಾ ದಿನ ಕಾರ್ಯಕ್ರಮ: ಮಕ್ಕಳೊಂದಿಗೆ ಸಂಭ್ರಮಿಸಿದ ಪ್ರಧಾನಿ ಮೋದಿ

Published:
Updated:
ಮಹಿಳಾ ದಿನ ಕಾರ್ಯಕ್ರಮ: ಮಕ್ಕಳೊಂದಿಗೆ ಸಂಭ್ರಮಿಸಿದ ಪ್ರಧಾನಿ ಮೋದಿ

ಝುಂಝುನು(ರಾಜಸ್ಥಾನ): ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಕ್ಕಳೊಂದಿಗೆ ಕೆಲ ಕಾಲ ಕಳೆದು ಸಂಭ್ರಮಿಸಿದರು.

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಝುಂಝುನುದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮೈಕ್‌ ಹಿಡಿದಿದ್ದ ಪ್ರಧಾನಿ ಜೋರಾಗಿ ಕುಣಿಯುವಂತೆ ಮಕ್ಕಳನ್ನು ಪ್ರೇರೇಪಿಸುತ್ತಿದ್ದರು. ಮಕ್ಕಳು ತಮಗೆ ಇಚ್ಛೆ ಬಂದಂತೆ ಕುಣಿಯುತ್ತಿದ್ದರು. ಮೈಕ್‌ ಹಿಡಿದು ಅವರನ್ನು ಮಾತನಾಡಿಸುವ ಪ್ರಯತ್ನವನ್ನೂ ಮಾಡಿದರು.

ಇಲ್ಲಿನ ಸಾರ್ವಜನಿಕ ಕಾರ್ಯಕ್ರಮದಲ್ಲಿ ‘ಬೇಟಿ ಬಚಾವೊ, ಬೇಟಿ ಪಡಾವೊ’ ಅಭಿಯಾನದ ವಿಸ್ತರಣೆಗೆ ಚಾಲನೆ ನೀಡಿ ಪ್ರಧಾನಿ ಮಾತನಾಡಿದರು. ಈ ಅಭಿಯಾನವನ್ನು ದೇಶದ 161 ಜಿಲ್ಲೆಗಳಿಂದ 640 ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತಿದೆ. 

ಛತ್ತೀಸ್‌ಗಢದ ಕುನ್ವಾರ್‌ ಬಾಯಿ ಅವರನ್ನು ನೆನಪಿಸಿಕೊಂಡ ಪ್ರಧಾನಿ, ‘ಶೌಚಗೃಹಗಳ ನಿರ್ಮಾಣಕ್ಕಾಗಿ ತನ್ನಲ್ಲಿದ್ದ ಮೇಕೆಗಳನ್ನು ಮಾರಾಟ ಮಾಡಿದಳು. ಸ್ವಚ್ಛ ಭಾರತದಲ್ಲಿ ಆಕೆಯ ಕೊಡುಗೆ ಎಂದಿಗೂ ಮರೆಯಲಾಗದ್ದು’ ಎಂದರು. 106 ವರ್ಷ ವಯಸ್ಸಿನ ಕುನ್ವಾರ್‌ ಬಾಯಿ ಇತ್ತೀಚೆಗಷ್ಟೇ ನಿಧನರಾದರು. 

ಮಹಿಳೆ ಮಾನವ ಸಮುದಾಯಕ್ಕೆ ಸ್ಫೂರ್ತಿಯ ಸೆಲೆ ಇದ್ದಂತೆ. ಮನುಕುಲಕ್ಕಾಗಿ ಆಕೆಯ ಕಾರ್ಯ, ಕೊಡುಗೆ ಹೆಗ್ಗುರುತು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry