ಗೂಬೆ ಹಿಡಿದು ಮಾರಾಟಕ್ಕೆ ಯತ್ನ

7

ಗೂಬೆ ಹಿಡಿದು ಮಾರಾಟಕ್ಕೆ ಯತ್ನ

Published:
Updated:
ಗೂಬೆ ಹಿಡಿದು ಮಾರಾಟಕ್ಕೆ ಯತ್ನ

ಹನೂರು: ಮಲೆಮಹದೇಶ್ವರ ವನ್ಯಧಾಮದಲ್ಲಿ ಗೂಬೆಗಳನ್ನು ಹಿಡಿದು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ತಾಲ್ಲೂಕಿನ ಮಿಣ್ಯಂ ಗ್ರಾಮದ ಶಂಬೇಗೌಡ ಮತ್ತು ಕೆಂಪಣ್ಣ ಬಂಧಿತ ಆರೋಪಿಗಳು.

ರಾಮಾಪುರ ವನ್ಯಜೀವಿ ವಲಯದ ಮಂಚಾಪುರ ಗ್ರಾಮದ ಗುಡ್ಡದ ಹಿಂಭಾಗ ಗೂಬೆಯನ್ನು ಹಿಡಿದು ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry