ನಿರ್ದೇಶಕ ಸ್ಥಾನದಿಂದ ಪತ್ತಾರ ಅನರ್ಹ

7
ಮರುಪಾವತಿಸದ ಸಾಲ:

ನಿರ್ದೇಶಕ ಸ್ಥಾನದಿಂದ ಪತ್ತಾರ ಅನರ್ಹ

Published:
Updated:

ಖಾನಾಪುರ: ತಾವೇ ನಿರ್ದೇಶಕರಾಗಿದ್ದ ಖಾನಾಪುರ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಸಂಘದಿಂದ ಪಡೆದ ಸಾಲವನ್ನು ಮರುಪಾವತಿಸದ ಅಶೋಕ ಪತ್ತಾರ ಅವರನ್ನು ಸಂಘದ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿ ಸಹಕಾರ ಸಂಘಗಳ ಉಪನಿಬಂಧಕರು ಆದೇಶ ನೀಡಿದ್ದಾರೆ.

2013ರಲ್ಲಿ ಜರುಗಿದ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಂಘದ ನಿರ್ದೇಶಕರಾಗಿ ಅಶೋಕ ಅವಿರೋಧವಾಗಿ ಆಯ್ಕೆಯಾಗಿದ್ದರು. ಸಂಘದಿಂದ ಪಡೆದ ಸಾಲವನ್ನು ಮರುಪಾವತಿ ಮಾಡಿರಲಿಲ್ಲ. ಇದರ ಬಗ್ಗೆ ಶಿಕ್ಷಕ ಶಿವಾನಂದ ಕುಂದರಗಿ ಅವರು 2016ರಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಾಲಯ ಶಿಕ್ಷಕರ ಸಂಘದ ನಿರ್ದೇಶಕ ಹುದ್ದೆಯಿಂದ ಅನರ್ಹಗೊಳಿಸಿ ಆದೇಶಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry