ನಂ. 1 ಯಾರಿ...

7

ನಂ. 1 ಯಾರಿ...

Published:
Updated:
ನಂ. 1 ಯಾರಿ...

‘ನಂ. 1 ಯಾರಿ ವಿತ್ ಶಿವಣ್ಣ’ ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ಹೊಸ ಟಾಕ್ ಶೋ. ಈಗಾಗಲೇ, ಉಪೇಂದ್ರ ಹಾಗೂ ಗುರುಕಿರಣ್ ತಮ್ಮ ಸ್ನೇಹದ ಬಗ್ಗೆ ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಈ ವಾರ ‘ಟಗರು’ ಚಿತ್ರದಲ್ಲಿ ಡಾಲಿ ಮತ್ತು ಚಿಟ್ಟೆ ಪಾತ್ರದ ಮೂಲಕ ವಿಲನ್‌ಗಳಾಗಿ ಮಿಂಚಿರುವ ಧನಂಜಯ್‌ ಮತ್ತು ವಸಿಷ್ಠ ಸಿಂಹ ಅವರು ಶಿವರಾಜ್‌ಕುಮಾರ್ ಅವರೊಂದಿಗೆ ಕುತೂಹಲ ಸಂಗತಿಗಳನ್ನು ಹಂಚಿಕೊಳ್ಳಲಿದ್ದಾರೆ. ನಟಿ ಮಾನ್ವಿತಾ ಹರೀಶ್ ಕೂಡ ಭಾಗವಹಿಸಲಿದ್ದು, ತರಲೆ, ತಮಾಷೆ ಹೆಚ್ಚಲಿದೆ. ಧನಂಜಯ್ ಅವರಿಗೆ ಗರ್ಲ್‌ಫ್ರೆಂಡ್ ಇದ್ದಾರೆಯೇ? ಎಂದು ಶಿವಣ್ಣ ಕೇಳುವ ಪ್ರಶ್ನೆಗೆ ಉತ್ತರ ಸಿಗಲಿದೆ. ವಸಿಷ್ಠ ಸಿಂಹ ತಮ್ಮ ಬೇಸ್‌ವಾಯ್ಸ್‌ನಲ್ಲಿ ಹಾಡೊಂದನ್ನು ಹಾಡಲಿದ್ದಾರೆ.

‘ಟಗರು’ ತಂಡ ಸಿನಿಮಾ ಸೆಟ್‌ನ ಅನುಭವಗಳನ್ನು ಮೆಲುಕು ಹಾಕಲಿದೆ. ಈ ಕಾರ್ಯಕ್ರಮ ಭಾನುವಾರ ರಾತ್ರಿ 8ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry