ಕೇಂದ್ರ ಸಚಿವ ಸ್ಥಾನಕ್ಕೆ ಟಿಡಿಪಿಯ ಇಬ್ಬರು ಸಂಸದರ ರಾಜೀನಾಮೆ: ಫಲ ನೀಡದ ಪ್ರಧಾನಿ ಮೋದಿ ಭೇಟಿ

ಮಂಗಳವಾರ, ಮಾರ್ಚ್ 19, 2019
28 °C

ಕೇಂದ್ರ ಸಚಿವ ಸ್ಥಾನಕ್ಕೆ ಟಿಡಿಪಿಯ ಇಬ್ಬರು ಸಂಸದರ ರಾಜೀನಾಮೆ: ಫಲ ನೀಡದ ಪ್ರಧಾನಿ ಮೋದಿ ಭೇಟಿ

Published:
Updated:
ಕೇಂದ್ರ ಸಚಿವ ಸ್ಥಾನಕ್ಕೆ ಟಿಡಿಪಿಯ ಇಬ್ಬರು ಸಂಸದರ ರಾಜೀನಾಮೆ: ಫಲ ನೀಡದ ಪ್ರಧಾನಿ ಮೋದಿ ಭೇಟಿ

ನವದೆಹಲಿ: ಕೇಂದ್ರ ಸಚಿವರಾಗಿರುವ ಟಿಡಿಪಿಯ ಇಬ್ಬರು ಸಂಸದರು ಗುರುವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನಾಗರಿಕ ವಿಮಾನಯಾನ ಸಚಿವರಾದ ಟಿಡಿಪಿಯ ಅಶೋಕ್ ಗಜಪತಿ ರಾಜು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ವೈ.ಎಸ್. ಚೌಧರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ ಆಂಧ್ರಪ್ರದೇಶವನ್ನು ಕಡೆಗಣಿಸಿದ ಸಂಬಂಧ ಟಿಡಿಪಿ (ತೆಲುಗು ದೇಶಂ ಪಾರ್ಟಿ) ಮತ್ತು ಬಿಜೆಪಿ ನಡುವೆ ವಿರಸ ಹೆಚ್ಚುತ್ತಿರುವ ಬೆನ್ನಲ್ಲೇ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಸಚಿವರಿಗೆ ರಾಜೀನಾಮೆ ನೀಡುವಂತೆ ಬುಧವಾರ ಸೂಚಿಸಿದ್ದರು.

ಆಂಧ್ರಪ್ರದೇಶ ಪುನರ್‌ಸಂಘಟನೆ ಕಾಯ್ದೆ 2014, ರಾಜ್ಯಕ್ಕೆ ವಿಶೇಷ ಸ್ಥಾನಮಾನ ಮತ್ತು ಲೋಕಸಭೆಯಲ್ಲಿ ನೀಡಿದ ಭರವಸೆಗಳನ್ನು ನಿರ್ಲಕ್ಷಿಸುವ ಮೂಲಕ ರಾಜ್ಯದ ಜನರ ಭಾವನೆಗಳನ್ನು ಕೇಂದ್ರ ಸರ್ಕಾರ ಅವಮಾನಿಸುತ್ತಿದೆ ಎಂದು ನಾಯ್ಡು ಆಕ್ರೋಶ ವ್ಯಕ್ತಪಡಿಸಿದ್ದರು.

ಇಂದು ಸಿಎಂ ಚಂದ್ರಬಾಬು ನಾಯ್ಡು ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಟೆಲಿಫೋನ್‌ ಸಂಭಾಷಣೆ ನಡೆಸಿ, ಬೇಡಿಕೆ ಈಡೇರಿಕೆ ಕುರಿತು ಚರ್ಚಿಸುವುದಾಗಿ ಭರವಸೆ ನೀಡಿದ್ದರು. ಸಂಜೆ ಪ್ರಧಾನಿ ಮೋದಿ ಅವರನ್ನು ಸಚಿವರಾದ ಚೌಧರಿ ಹಾಗೂ ಅಶೋಕ್‌ ಗಜಪತಿ ರಾಜು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ರಾಜೀನಾಮೆ ಸಲ್ಲಿಸಿದ್ದಾರೆ.

* ಎನ್‌ಡಿಎ ಕೂಟದಲ್ಲಿ ಮುಂದುವರಿಯಲಾಗುತ್ತದೆ. ಆದರೆ, ಯಾವುದೇ ಸಚಿವ ಸ್ಥಾನವನ್ನು ಹೊಂದುವುದಿಲ್ಲ. ಈ ನಿರ್ಧಾರದಲ್ಲಿ ತಪ್ಪಿಲ್ಲ ಎಂದು ಭಾವಿಸಿದ್ದೇನೆ.
–ವೈ.ಎಸ್. ಚೌಧರಿ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry