ಸೋನಂ ಮದುವೆ!

7

ಸೋನಂ ಮದುವೆ!

Published:
Updated:
ಸೋನಂ ಮದುವೆ!

ನಟಿ ಶ್ರೀದೇವಿ ಸಾವಿನಿಂದಾಗಿ ನಟಿ ಸೋನಂ ಕಪೂರ್ ಹಾಗೂ ಆನಂದ್‌ ಅಹುಜಾ ಅವರ ಮದುವೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

ಈ ವರ್ಷದ ಜೂನ್‌– ಜುಲೈ ತಿಂಗಳಲ್ಲಿ ಜೋಧ್‌ಪುರದ ಉಮೈದ್‌ ಭವನ ಅರಮನೆಯಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಫೆಬ್ರುವರಿ 24ರಂದು ಶ್ರೀದೇವಿ ಅವರು ದಿಢೀರ್‌ ಸಾವನ್ನಪ್ಪಿದ್ದರಿಂದ ಈ ಮದುವೆ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎನ್ನಲಾಗಿದೆ.

‘ಸದ್ಯದ ಪರಿಸ್ಥಿತಿ ಬದಲಾಗಿದ್ದರಿಂದ ನಿರ್ಧರಿಸಿದ ಸಮಯಕ್ಕೆ ಈ ಮದುವೆ ನಡೆಯುವುದಿಲ್ಲ. ಆನಂದ್‌ ಅಹುಜಾ ಅವರು ಕಷ್ಟದ ಸಮಯದಲ್ಲೂ ಕುಟುಂಬಕ್ಕೆ ಸಹಾಯಕ್ಕೆ ನಿಂತಿದ್ದರು. ಅವರು ಬರೀ ಸೋನಂ ಕಪೂರ್‌ ಅವರನ್ನಷ್ಟೇ ಕಾಳಜಿ ಮಾಡುವುದಿಲ್ಲ. ಕಪೂರ್‌ ಕುಟುಂಬದ ಕಾಳಜಿನೂ ವಹಿಸುತ್ತಾರೆ' ಎಂದು ಕಪೂರ್‌ ಕುಟುಂಬದ ಆಪ್ತರು ಹೇಳಿಕೊಂಡಿದ್ದಾರೆ.

ಸೋನಂ ಹಾಗೂ ಆನಂದ್‌ ಅಹುಜಾ ಅವರ ಮದುವೆ ವಿಚಾರ ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿ ಮಾಡಿತ್ತು. ಈ ಹಿಂದೆ ಸೋನಂ ಕಪೂರ್‌ ಅವರು ಆನಂದ್‌ ಅವರ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಪ್ರೇಮಿಗಳ ದಿನದ ಶುಭಾಶಯ ಕೋರಿದ್ದರು. ಅಲ್ಲಿಂದ ಅವರ ಮದುವೆ ವಿಚಾರ ಹೆಚ್ಚು ಸುದ್ದಿ ಮಾಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry