ಪ್ಲಸ್‌ ಸೈಜ್‌ ಫ್ಯಾಷನ್‌ ಷೋ

ಮಂಗಳವಾರ, ಮಾರ್ಚ್ 26, 2019
33 °C

ಪ್ಲಸ್‌ ಸೈಜ್‌ ಫ್ಯಾಷನ್‌ ಷೋ

Published:
Updated:
ಪ್ಲಸ್‌ ಸೈಜ್‌ ಫ್ಯಾಷನ್‌ ಷೋ

ಯಾವ ಡ್ರೆಸ್‌ ಧರಿಸಿದರೂ ಚೆನ್ನಾಗಿ ಕಾಣುವುದಿಲ್ಲ ಎಂಬುದು ಪ್ಲಸ್‌ ಸೈಜ್‌ ಇರುವವರ ಚಿಂತೆ. ತಮ್ಮ ದಪ್ಪ ಹಾಗೂ ದುಂಡಗಿನ ಮೈಕಟ್ಟಿನಿಂದಾಗಿ ಫ್ಯಾಷನ್‌ ಟ್ರೆಂಡ್‌ಗಳನ್ನು ಅನುಸರಿಸಲಾಗುವುದಿಲ್ಲ ಎನ್ನುವ ಕೊರಗು ಅವರದು. ‘ಆದರೆ ದಪ್ಪಗಿರುವವರು ಕೊರಗಬೇಕಿಲ್ಲ, ಅವರೂ ಹೊಸ ಶೈಲಿಯ ಬಟ್ಟೆಗಳನ್ನು ತೊಟ್ಟುಕೊಳ್ಳಬಹುದು’ ಎಂದು  ಫ್ಲಸ್‌ ಸೈಜ್‌ ಹೆಸರಿನಲ್ಲಿ ಈಚೆಗೆ ಹೊಸ ಹೊಸ ಫ್ಯಾಷನ್‌ಗಳನ್ನು ಪರಿಚಯಿಸುತ್ತಿದ್ದಾರೆ ಸಹೋದರಿಯರಾದ ಮುಂಬೈನ  ವಸ್ತ್ರವಿನ್ಯಾಸಕಿಯರಾದ ರಿಕ್ಸಿ ಮತ್ತು ಟಿಂಕಾ ಭಾಟಿಯಾ.

ಟಿಂಕಾ ಸ್ವತಃ ದಪ್ಪಗಿರುವುದರಿಂದ ಇಂತಹ ವಿನ್ಯಾಸ ಸಾಧ್ಯವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ತಮ್ಮನ್ನು ಫ್ಲಸ್‌ ಸೈಜ್‌, ದಪ್ಪ, ದುಂಡಗಿನ ಮಹಿಳೆ, ಯಾವ ರೀತಿ ಬೇಕಾದರೂ ಕರೆಯಿರಿ ಎಂದು ಹೇಳಿಕೊಳ್ಳುತ್ತಾರೆ. ಸಹೋದರಿ ರಿಕ್ಸಿ ಅವರ ಜೊತೆ ಸೇರಿ ಪ್ಲಸ್‌ ಸೈಜ್‌ ಮಹಿಳೆಯರ ಬಟ್ಟೆ ಕುರಿತಾದ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದಾರೆ.ಈಚೆಗೆ ಮುಂಬೈನಲ್ಲಿ ನಡೆದ ಫ್ಯಾಷನ್‌ ಷೋದಲ್ಲಿ ದಪ್ಪ, ದುಂಡನೆಯ ಮೈಕಟ್ಟಿನ ಮಹಿಳೆಯರು ಭಿನ್ನ ಭಿನ್ನ ಶೈಲಿಯ ಡಿಸೈನರ್‌ ವಸ್ತ್ರಗಳನ್ನು ತೊಟ್ಟು ರ್‍ಯಾಂಪ್‌ ಮೇಲೆ ಮಿಂಚಿದರು. ಇದರಲ್ಲಿ 19ರಿಂದ 80 ವರ್ಷದ ತನಕ ವಯಸ್ಸಿನ ರೂಪದರ್ಶಿಯರು ಕ್ಯಾಟ್‌ ವಾಕ್‌ ಮಾಡಿದ್ದು ವಿಶೇಷವಾಗಿತ್ತು. ಎಲ್ಲಾ ರೂಪದರ್ಶಿಗಳ ಬಟ್ಟೆಗಳು ವಿಶೇಷ ವಿನ್ಯಾಸದಿಂದ ಕಣ್ಸೆಳೆಯುತ್ತಿದ್ದಿದು ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry