ಅನಂತಕುಮಾರ ಹೆಗಡೆ, ಸಿ.ಟಿ.ರವಿಗೆ ಹೈಕೋರ್ಟ್‌ ನೋಟಿಸ್

ಮಂಗಳವಾರ, ಮಾರ್ಚ್ 26, 2019
31 °C

ಅನಂತಕುಮಾರ ಹೆಗಡೆ, ಸಿ.ಟಿ.ರವಿಗೆ ಹೈಕೋರ್ಟ್‌ ನೋಟಿಸ್

Published:
Updated:
ಅನಂತಕುಮಾರ ಹೆಗಡೆ, ಸಿ.ಟಿ.ರವಿಗೆ ಹೈಕೋರ್ಟ್‌ ನೋಟಿಸ್

ಬೆಂಗಳೂರು: ಟಿಪ್ಪು ಜಯಂತಿ‌ ಆಚರಣೆ ವೇಳೆ ಅವಹೇಳನಕಾರಿ ಹೇಳಿಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತು ಶಾಸಕ ಸಿ.ಟಿ.ರವಿಗೆ ಹೈಕೋರ್ಟ್ ಏಕಸದಸ್ಯ ಪೀಠ ಗುರುವಾರ ನೋಟಿಸ್‌ ಜಾರಿ ಮಾಡಿದೆ.

ಬಿಜೆಪಿ ನಾಯಕರಾದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತು ಶಾಸಕರ ಸಿ.ಟಿ.ರವಿ‌ ಕೋಮುಗಲಭೆ ಪ್ರಚೋದಿಸುವ ರೀತಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಅಲಂಪಾಷ ದೂರು ನೀಡಿದ್ದರು.

ಇಂದಿರಾನಗರ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದರಿಂದ ಅಲಂಪಾಷ ಅಧೀನ ನ್ಯಾಯಾಲಯದಲ್ಲಿ ಖಾಸಗಿ ದೂರು‌ ದಾಖಲಿಸಿದ್ದರು.

ವಿಚಾರಣೆ ನಡೆಸಿದ ಅಧೀನ ನ್ಯಾಯಾಲಯ ದೂರು ವಜಾಗೊಳಿಸಿತ್ತು. ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry