ಬಾಕ್ಸರ್ ಜಾಕ್ವೆಲಿನ್

7

ಬಾಕ್ಸರ್ ಜಾಕ್ವೆಲಿನ್

Published:
Updated:
ಬಾಕ್ಸರ್ ಜಾಕ್ವೆಲಿನ್

‘ಬಾಕ್ಸಿಂಗ್ ಮತ್ತು ಕಿಕ್‌ ಬಾಕ್ಸಿಂಗ್ ನನ್ನ ನಿತ್ಯ ವ್ಯಾಯಾಮದ ಭಾಗ. ಲಿಂಗ ಅಸಮಾನತೆಗೆ ಇದು ಮದ್ದು’ ಎಂದು ಮುದ್ದು ಮೊಗದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪ್ರತಿಕ್ರಿಯಿಸಿದ್ದಾರೆ.

ಸೂಪರ್‌ ಫೈಟ್ ಲೀಗ್‌ನ ರಾಯಭಾರಿಯೂ ಆಗಿರುವ ಜಾಕ್ವೆಲಿನ್, ‘ಅಕ್ಷಯ್‌ಕುಮಾರ್ ಮತ್ತು ಸಿದ್ಧಾರ್ಥ ಮಲ್ಹೋತ್ರಾ ಅಭಿನಯದ ‘ಬ್ರದರ್’ ಚಿತ್ರದಲ್ಲಿ ಬಾಕ್ಸಿಂಗ್‌ನ ಝಲಕ್ ಸಿಕ್ಕಿತು. ನಂತರದ ದಿನಗಳಲ್ಲಿ ಇದನ್ನು ನನ್ನ ಬದುಕಿನ ಭಾಗವಾಗಿಸಿಕೊಂಡೆ. ಬಾಕ್ಸಿಂಗ್‌ ಹುಡುಗರಿಗಷ್ಟೇ ಸೀಮಿತವಲ್ಲ. ಯಾರು ಬೇಕಾದರೂ ಕಲಿಯಬಹುದು. ಫಿಟ್‌ನೆಸ್ ಕಾಪಾಡಿಕೊಳ್ಳಲೂ ಇದು ಸಹಕಾರಿ’ ಎನ್ನುತ್ತಾರೆ ಅವರು.

2014ರಲ್ಲಿ ಬಿಡುಗಡೆಯಾಗಿದ್ದ ‘ಕಿಕ್‌’ ಚಿತ್ರದಲ್ಲಿ ಸಲ್ಮಾನ್ ಹಾಗೂ ಜಾಕ್ವೆಲಿನ್ ಜೋಡಿ ಸಿನಿರಸಿಕರ ಮನಗೆದ್ದಿತ್ತು. ಇದೀಗ ಮತ್ತೆ ಈ ಜೋಡಿಯನ್ನು ತೆರೆಮೇಲೆ ನೋಡುವ ಅವಕಾಶ ಅಭಿಮಾನಿಗಳಲ್ಲಿ ಸಂತಸ ತಂದಿದೆ. ‘ಕಿಕ್‌–2’ ಚಿತ್ರದಲ್ಲಿ ಜಾಕ್ವೆಲಿನ್ ಅಭಿನಯಿಸುವುದಿಲ್ಲ ಎಂಬ ಗಾಳಿಸುದ್ದಿಗೆ ನಿರ್ಮಾಪಕ ಸಾಜಿದ್‌ ನಡಿಯವಾಲ ಈಚೆಗಷ್ಟೇ ತೆರೆ ಎಳೆದಿದ್ದರು. ನಿರ್ಮಾಪಕರು ಮಾತನ್ನು ಇದೀಗ ಜಾಕ್ವೆಲಿನ್ ಅನುಮೋದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry