7

ಮುಖ್ಯ ಬಾಗಿಲಿಗೆ ವಾಸ್ತು ನಿಯಮ

Published:
Updated:
ಮುಖ್ಯ ಬಾಗಿಲಿಗೆ ವಾಸ್ತು ನಿಯಮ

ಮನೆಯ ಮುಖ್ಯದ್ವಾರ ವಾಸ್ತು ಪ್ರಕಾರ ಇರದೇ ಹೋದರೆ ಮನೆಯೊಳಗೆ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ. ಮನೆಯಲ್ಲಿ ಸುಖ, ನೆಮ್ಮದಿ ನೆಲೆಸಬೇಕಾದರೆ ಮುಖ್ಯದ್ವಾರ ವಾಸ್ತು ಪ್ರಕಾರವೇ ಇರಬೇಕು ಎಂಬ ನಂಬಿಕೆ ಇದೆ.

* ಕಾಂಪೌಂಡ್‌ ಗೇಟ್‌ಗೆ ಎದುರಾಗಿ ಮುಖ್ಯದ್ವಾರ ಇರಬಾರದು. ಇತರ ಕಟ್ಟಡ ಅಥವಾ ಮರಗಳ ನೆರಳು ಬಾಗಿಲಿನ ಮೇಲೆ ಬೀಳಬಾರದು.

* ಮನೆಯ ಬೇರೆ ಬಾಗಿಲುಗಳಿಗಿಂತ ಮನೆಯ ಮುಖ್ಯದ್ವಾರದ ಬಾಗಿಲು ದೊಡ್ಡದಿರಬೇಕು.

* ಕಸದ ಬುಟ್ಟಿ ಅಥವಾ ತ್ಯಾಜ್ಯವನ್ನು ಮನೆಯ ಬಾಗಿಲಿನ ಎದುರಿಗೆ ಇಡಬಾರದು. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ.

* ಗೋಡೆಯ ಮಧ್ಯ ಭಾಗದಲ್ಲಿ ಮುಖ್ಯ ದ್ವಾರ ಇರಬಾರದು.

* ಮುಖ್ಯ ಬಾಗಿಲಿಗೆ ಕಪ್ಪು ಬಣ್ಣ ಬಳಿಯಬಾರದು.

* ಮನೆಯ ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಸ್ವಲ್ಪ ದೊಡ್ಡದಾದ ಸ್ವಸ್ತಿಕ್‌, ಓಂ ಅಂತಹ ಶುಭಕಾರಕ ಚಿಹ್ನೆ ಹಾಕಿದರೆ ಒಳ್ಳೆಯದು.

* ಮನೆಯ ಮುಂಬಾಗಿಲು ತೆಗೆಯುವಾಗ, ಹಾಕುವಾಗ ಶಬ್ದ ಆಗುವುದು ಒಳ್ಳೆಯ ಸೂಚನೆಯಲ್ಲ.

(ಮಾಹಿತಿ: ವಾಸ್ತುಶಾಸ್ತ್ರ ಗುರು)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry