ಶನಿವಾರ, 9–3–1968

7

ಶನಿವಾರ, 9–3–1968

Published:
Updated:

5 ವರ್ಷಗಳಲ್ಲಿ ಶಾಸನಗಳ ಕನ್ನಡೀಕರಣ

ಬೆಂಗಳೂರು, ಮಾ. 8–
ಶಾಸನಗಳನ್ನು ಕನ್ನಡಕ್ಕೆ ಭಾಷಾಂತರಿಸುವುದಕ್ಕಾಗಿ ಸರಕಾರವು ನೇಮಿಸಿರುವ ಆಯೋಗ ಸಂಬಂಧದಲ್ಲಿ 1968ರ ಫೆಬ್ರವರಿವರೆಗೆ ಸುಮಾರು 74,700 ರೂ. ವೆಚ್ಚವಾಗಿದೆಯೆಂದೂ ನ್ಯಾಯಾಂಗ ಸಚಿವ ಶ್ರೀ ಎಸ್‌.ಆರ್‌. ಕಂಠಿಯವರು ಇಂದು ವಿಧಾನಸಭೆಯಲ್ಲಿ ಶ್ರೀ ಡಿ.ಬಿ. ಕಲಮಂಕರ್‌ (ಪಿ.ಎಸ್‌.ಪಿ. –ಆನಂದ್‌) ಅವರಿಗೆ ತಿಳಿಸಿದರು.

ಗಂಗೆ ಬಳಿಯೇ ಜಲಕ್ಷಾಮ!

ಮುಂಘೇರ್‌, ಮಾ. 8–
ಪವಿತ್ರ ಗಂಗಾ ನದಿಯ ಬಲ ದಂಡೆಯಲ್ಲಿರುವ ಮುಂಘೇರ್‌ ನಗರದಲ್ಲಿ ಆರು ದಿನಗಳಿಂದ ನೀರು ಸರಬರಾಜೇ ಇಲ್ಲದೆ ತೊಳೆಯದ ಶೌಚಾಲಯ ಮತ್ತು ಚರಂಡಿಗಳಿಂದ ದುರ್ನಾತ ಬಡಿಯುತ್ತಿದೆ.

ಗಂಗೆಯಿಂದಲೇ ನಗರಕ್ಕೆ ನೀರು ಸರಬರಾಜು. ಆದರೆ ನದಿಯಲ್ಲಿ ಆರು ದಿನಗಳ ಹಿಂದೆ ತೈಲ ವಸ್ತು ಹರಿದು ಎರಡು ಬಾರಿ ಜ್ವಾಲೆ ಎದ್ದು ಇಬ್ಬರಾದರೂ ಸತ್ತರಲ್ಲದೆ ನೀರೂ ಮಲಿನವಾಗಿದೆ.

ಅಸ್ಸಾಮಿನ ಸಿಲ್ಚಾರ್‌ನಲ್ಲಿ ವೆಂಕೋಬರಾವ್‌ ಅವರ ನಿಧನ

ಬೆಂಗಳೂರು, ಮಾ. 8–
ಭಾರತ ಸರಕಾರದ ಯೋಜನಾ ಕ್ಷೇತ್ರ ಪ್ರಚಾರದ ಡೈರೆಕ್ಟೋರೇಟ್‌ನ ಪ್ರಾದೇಶಿಕ ಅಧಿಕಾರಿಯಾಗಿದ್ದ ಕರ್ನಾಟಕದ ಹಿರಿಯ ಪತ್ರಿಕೋದ್ಯಮಿಗಳಲ್ಲೊಬ್ಬರಾದ ಶ್ರೀ ಎನ್‌.ಎಸ್‌. ವೆಂಕೋಬರಾಯರು ಅಸ್ಸಾಮಿನ ಸಿಲ್ಚಾರ್‌ನಲ್ಲಿ ನಿನ್ನೆ ನಿಧನರಾದರೆಂದು ಇಲ್ಲಿಗೆ ಸುದ್ದಿ ಬಂದಿದೆ.

ಶಿವಸೇನೆ, ಲಚ್ಚಿತ್‌ಸೇನೆ ನಿಷೇಧಕ್ಕೆ ಲೋಕಸಭೆ ಸದಸ್ಯರ ಒತ್ತಾಯ

ನವದೆಹಲಿ, ಮಾ. 8–
ಶಿವಸೇನೆ ಹಾಗೂ ಲಚ್ಚಿತ್‌ ಸೇನೆ ಚಟುವಟಿಕೆಗಳ ಬಗ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ ಹಾಗೂ ವಿರೋಧಪಕ್ಷದ ಸದಸ್ಯರು ಇಂದು ಪುನಃ ಕಳವಳವನ್ನು ವ್ಯಕ್ತಪಡಿಸಿ ಅವುಗಳನ್ನು ನಿಷೇಧಿಸಬೇಕೆಂದು ಒತ್ತಾಯಪಡಿಸಿದರು.

ರೊಡೀಸಿಯದಲ್ಲಿ : 11 ರಂದು ಇನ್ನೂ ಆರು ಮಂದಿ ಆಪ್ರಿಕನರಿಗೆ ಗಲ್ಲು

ಸ್ಯಾಲಿಸ್‌ಬರಿ (ರೊಡೀಸಿಯ), ಮಾ. 8–
ಶಿಕ್ಷೆಗೆ ಗುರಿಯಾಗಿರುವ ಇನ್ನೂ ಆರು ಮಂದಿ ಆಫ್ರಿಕನರನ್ನು ಸೋಮವಾರ ಬೆಳಿಗ್ಗೆ ಸ್ಯಾಲಿಸ್‌ಬರಿ ಸೆಂಟ್ರಲ್‌ ಜೈಲಿನಲ್ಲಿ ಗಲ್ಲಿಗೆ ಹಾಕಲಾಗುವುದೆಂದು ಇಂದು ರಾತ್ರಿ ಇಲ್ಲಿ ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry