‘ಸಿ.ಎಂ ತಲೆಯಲ್ಲಿ ಸಕ್ಕರೆ ಲೇಪಿತ ಯೂರಿಯಾ ಗೊಬ್ಬರವಿದೆ’

7

‘ಸಿ.ಎಂ ತಲೆಯಲ್ಲಿ ಸಕ್ಕರೆ ಲೇಪಿತ ಯೂರಿಯಾ ಗೊಬ್ಬರವಿದೆ’

Published:
Updated:
‘ಸಿ.ಎಂ ತಲೆಯಲ್ಲಿ ಸಕ್ಕರೆ ಲೇಪಿತ ಯೂರಿಯಾ ಗೊಬ್ಬರವಿದೆ’

ಬಾಗಲಕೋಟೆ: ‘ನನ್ನ ತಲೆಯಲ್ಲಿ ಮೆದುಳು ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅದು ಇದೆಯೋ ಇಲ್ಲವೋ ಎಂಬುದನ್ನು ಚುನಾವಣೆಯಲ್ಲಿ ಜನ ತೀರ್ಮಾನಿಸುತ್ತಾರೆ. ಆದರೆ ಸಿದ್ದರಾಮಯ್ಯ ತಲೆಯಲ್ಲಿ ಮಾತ್ರ ಸಕ್ಕರೆ ಲೇಪಿತ ಯೂರಿಯಾ ಗೊಬ್ಬರವಿದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಗುರುವಾರ ಇಲ್ಲಿ ಟೀಕಿಸಿದರು.

‘ಜೈಲಿಗೆ ಹೋದವರನ್ನು ಹತ್ತಿರ ಸೇರಿಸುವುದಿಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದರು. ಈಗ ಅವರ ಎಡಗಡೆ ಆನಂದಸಿಂಗ್, ಬಲಗಡೆ ನಾಗೇಂದ್ರ ಕೂತಿದ್ದಾರೆ. ಅವರೇನು ಜೈಲಿಗೆ ಹೋಗಿದ್ದರೋ ಇಲ್ಲವೇ ಸ್ವರ್ಗಕ್ಕೆ ಹೋಗಿ ಮಹಾಪುರುಷರ ಉಪದೇಶ ಕೇಳಿಬಂದಿದ್ದಾರೋ’ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

ಬಿಜೆಪಿ ಸಮಾವೇಶ ಮುಂದಕ್ಕೆ: ಕೂಡಲಸಂಗಮದಲ್ಲಿ ಶನಿವಾರ (ಮಾರ್ಚ್‌ 10) ನಡೆಯಬೇಕಿದ್ದ ಬಿಜೆಪಿ ಹಿಂದುಳಿದ ವರ್ಗದವರ, ಉತ್ತರ ಕರ್ನಾಟಕ ಭಾಗದ ಸಮಾವೇಶವನ್ನು ಮುಂದೂಡಲಾಗಿದೆ.

‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಮಾವೇಶಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ದೂರವಾಣಿ ಮೂಲಕ ತಿಳಿಸಿದರು. ಹೀಗಾಗಿ ಸಮಾವೇಶವನ್ನು ಮುಂದೂಡಲಾಗಿದೆ’ ಎಂದು ಕೆ.ಎಸ್.ಈಶ್ವರಪ್ಪ ಸುದ್ದಿಗಾರರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry