ಜಿಂಬಾಬ್ವೆ ಬೌಲರ್‌ ವಿಟೋರಿ ಅಮಾನತು

7

ಜಿಂಬಾಬ್ವೆ ಬೌಲರ್‌ ವಿಟೋರಿ ಅಮಾನತು

Published:
Updated:

ದುಬೈ: ನಿಯಮಬಾಹಿರ ಬೌಲಿಂಗ್ ಶೈಲಿಯಿಂದಾಗಿ ಜಿಂಬಾಬ್ವೆ ತಂಡದ ವೇಗದ ಬೌಲರ್ ಬ್ರಯನ್ ವಿಟೋರಿ ಅವರನ್ನು ಗುರುವಾರ ಅಮಾನತುಗೊಳಿಸಲಾಗಿದೆ.

ಭಾನುವಾರ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಅವರ ಬೌಲಿಂಗ್ ಶೈಲಿಯು ನಿಯಮಬಾಹಿರವಾಗಿತ್ತು ಎಂದು ಪಂದ್ಯದ ಅಧಿಕಾರಿಗಳು ದೂರು ನೀಡಿದ್ದರು. ಒಂದು ವರ್ಷದ ಅವಧಿಗೆ ಅವರನ್ನು ಅಮಾನತು ಮಾಡಲಾಗಿದೆ.

28 ವರ್ಷದ ವಿಟೋರಿ ಅವರ ಬೌಲಿಂಗ್‌ ಶೈಲಿಯನ್ನು ಅಧ್ಯಯನ ಮಾಡಿದ ಬಳಿಕ ಈ ನಿರ್ಧಾರಕ್ಕೆ ಬಂದಿರುವುದಾಗಿ ಐಸಿಸಿ ಹೇಳಿದೆ. ಮಂಗಳವಾರ ಅಫ್ಗಾನಿಸ್ತಾನ ಎದುರಿನ ಪಂದ್ಯದಲ್ಲಿ ಅವರು ಅಂತಿಮ ವಿಕೆಟ್ ಪಡೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry