ಶೂಟಿಂಗ್‌: ಫೈನಲ್‌ಗೆ ಅನೀಶ್, ನೀರಜ್‌

7

ಶೂಟಿಂಗ್‌: ಫೈನಲ್‌ಗೆ ಅನೀಶ್, ನೀರಜ್‌

Published:
Updated:
ಶೂಟಿಂಗ್‌: ಫೈನಲ್‌ಗೆ ಅನೀಶ್, ನೀರಜ್‌

ನವದೆಹಲಿ: ಭಾರತದ ಅನೀಶ್‌ ಭನ್ವಾಲ ಮತ್ತು ನೀರಜ್‌ ಕುಮಾರ್‌ ಮೆಕ್ಸಿಕೊದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಶೂಟಿಂಗ್‌ನ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.

25 ಮೀಟರ್ಸ್ ರ‍್ಯಾಪಿಡ್ ಫೈರ್‌ ಪಿಸ್ತೂಲು ವಿಭಾಗದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಅನೀಶ್‌ ಮೂರನೇಯವರಾದರು. ಈ ವಿಭಾಗದಲ್ಲಿ ಮೂವರು ಒಲಿಂಪಿಕ್‌ ಪದಕ ವಿಜೇತರು ಇದ್ದರು.

ಇತ್ತೀಚೆಗೆ ನಡೆದಿದ್ದ ರಾಷ್ಟ್ರೀಯ ಆಯ್ಕೆ ಸ್ಪರ್ಧೆಯಲ್ಲಿ 300ರ ಪೈಕಿ 294 ಶಾಟ್‌ಗಳ ಸಾಧನೆ ಮಾಡಿ ವಿಶ್ವದಾಖಲೆಯನ್ನು ಸರಿಗ‌ಟ್ಟಿದ್ದ ಅವರು ಗುರುವಾರ ಚೀನಾದ ಯುಹಾಂಗ್ ಲೀ ಮತ್ತು ಫ್ರಾನ್ಸ್‌ನ ಕ್ಲೆಮೆಂಟ್ ಬೆಸಗೆಟ್‌ ನಂತರದ ಸ್ಥಾನವನ್ನು ತಮ್ಮದಾಗಿಸಿಕೊಂಡರು.

291 ಶಾಟ್‌ಗಳ ಮೂಲಕ ನೀರಜ್‌ ಆರನೇ ಸ್ಥಾನದಲ್ಲಿ ಉಳಿದರು. ಮೂರು ಚಿನ್ನ ಮತ್ತು ನಾಲ್ಕು ಕಂಚಿನ ಪದಕಗಳೊಂದಿಗೆ ಭಾರತ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry