ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಲಕ್ಷ ಐ.ಟಿ ತಂತ್ರಜ್ಞರಿಗೆ ಜಪಾನ್‌ನಲ್ಲಿ ಅವಕಾಶ

Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತದ ಎರಡು ಲಕ್ಷ ಐ.ಟಿ ತಂತ್ರಜ್ಞರಿಗೆ ಜಪಾನ್‌ನಲ್ಲಿ ಉದ್ಯೋಗ ಅವಕಾಶಗಳು ಎದುರು ನೋಡುತ್ತಿವೆ’ ಎಂದು ಜಪಾನಿನ ವ್ಯಾಪಾರ ಮತ್ತು ಹೂಡಿಕೆಯ ಅಧಿಕೃತ ಸಂಸ್ಥೆಯಾಗಿರುವ ಜೆಟ್ರೊದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಶಿಗೆಕಿ ಮಯೆಡಾ ಹೇಳಿದ್ದಾರೆ.

‘ಐ.ಟಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಜಪಾನ್‌ ಭಾರಿ ಪ್ರಮಾಣದಲ್ಲಿ ಬಂಡವಾಳ ತೊಡಗಿಸುತ್ತಿದೆ. ಹೀಗಾಗಿ ಐ.ಟಿ ತಂತ್ರಜ್ಞರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ಕೈಬೀಸಿ ಕರೆಯುತ್ತಿವೆ. ಜಪಾನ್‌ನಲ್ಲಿ ಶಾಶ್ವತವಾಗಿ ನೆಲೆಸಲು ಭಾರತದ ಐ.ಟಿ ವೃತ್ತಿಪರರಿಗೆ ಸುಲಭವಾಗಿ ಗ್ರೀನ್‌ ಕಾರ್ಡ್‌ ಕೂಡ ನೀಡಲಾಗುವುದು. ಒಂದು ವರ್ಷಾವಧಿಯಲ್ಲಿ ಈ ಸೌಲಭ್ಯ ಕಲ್ಪಿಸಲಾಗುವುದು. ಇಷ್ಟು ಅಲ್ಪಾವಧಿಯಲ್ಲಿ ಗ್ರೀನ್ ಕಾರ್ಡ್‌ ಒದಗಿಸಲಾಗುತ್ತಿರುವುದು ವಿಶ್ವದಲ್ಲಿಯೇ ಮೊದಲನೆಯದಾಗಿದೆ’  ಎಂದು ಅವರು ಹೇಳಿದ್ದಾರೆ.

ಬೆಂಗಳೂರು ವಾಣಿಜ್ಯೋದ್ಯಮ ಸಂಘ (ಬಿಸಿಐಸಿ) ಮತ್ತು ಜೆಟ್ರೊ ಸಹಭಾಗಿತ್ವದಲ್ಲಿ ಗುರುವಾರ ಇಲ್ಲಿ ನಡೆದ ‘ಭಾರತ  ಮತ್ತು ಜಪಾನ್‌ ವಾಣಿಜ್ಯ ಪಾಲು
ದಾರಿಕೆ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

‘ಸದ್ಯಕ್ಕೆ ಜಪಾನ್‌ನಲ್ಲಿ  9 ಲಕ್ಷ ಐ.ಟಿ ತಂತ್ರಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದ 2 ಲಕ್ಷ ತಂತ್ರಜ್ಞರಿಗೆ ತಕ್ಷಣದ ಬೇಡಿಕೆ ಕಂಡುಬಂದಿದೆ. ದೇಶದಲ್ಲಿನ ಸಾಮಾಜಿಕ ಅಗತ್ಯಗಳನ್ನು ಈಡೇರಿಸಲು ತಂತ್ರಜ್ಞರಿಗೆ ವಿಪುಲ ಉದ್ಯೋಗ ಅವಕಾಶಗಳು ಇವೆ. 2030ರ ವೇಳೆಗೆ ಇದು 8 ಲಕ್ಷಕ್ಕೆ ಏರಿಕೆಯಾಗಲಿದೆ. ಈ ಬೇಡಿಕೆ ಪೂರೈಸಲು ಜಪಾನ್ ಭಾರತದತ್ತ ನೋಡುತ್ತಿದೆ.

‘ಸರಕುಗಳ ತಯಾರಿಕೆಗೆ ಜಪಾನ್‌ ವಿಶ್ವದಾದ್ಯಂತ ಖ್ಯಾತವಾಗಿದೆ. ತಯಾರಿಕೆ ತಂತ್ರಜ್ಞಾನದಲ್ಲಿ ಹೊಸ ಕ್ರಾಂತಿಯನ್ನೇ ತರಲು ಸಜ್ಜಾಗಿದೆ. ಜೀವವಿಜ್ಞಾನ, ಹಣಕಾಸು, ಕೃಷಿ ಮತ್ತು ಇತರ ಸೇವಾ ಕ್ಷೇತ್ರಗಳಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಹೊರಟಿದೆ. ಈ ಉದ್ದೇಶ ಕಾರ್ಯಗತಗೊಳಿಸಲು ಅರ್ಹ ಮತ್ತು ತರಬೇತಿ ಪಡೆದ ಐ.ಟಿ ವೃತ್ತಿನಿರತರನ್ನು ನೇಮಿಸಿಕೊಳ್ಳಲು ಮುಂದಾಗಿದೆ.

‘ಭಾರತದ ತಂತ್ರಜ್ಞರು ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ (ಎಲ್‌ಒಟಿ), ಕೃತಕ ಬುದ್ಧಿಮತ್ತೆ (ಐಎ), ಬಿಗ್‌ ಡೇಟಾ, ಸ್ವಯಂ ಚಾಲಿತ ಕಾರು, ಡ್ರೋನ್‌ ಮತ್ತಿತರ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲೂ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಜಪಾನ್‌ನಲ್ಲಿ ಉದ್ದಿಮೆ ಸಂಸ್ಥೆಗಳನ್ನು ಸ್ಥಾಪಿಸಲು ಮುಂದೆ ಬರಬೇಕು ಎಂದೂ ಅವರು ಭಾರತದ ಕಂಪನಿಗಳಿಗೆ ಆಹ್ವಾನ ನೀಡಿದರು. ಭಾರತದ ಬಂಡವಾಳ ಹೂಡಿಕೆಯಲ್ಲಿ ಜಪಾನ್‌ 3ನೇ ಸ್ಥಾನದಲ್ಲಿ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT