ಬ್ರಿಟನ್: ಪ್ರಶಸ್ತಿ ಪಟ್ಟಿಯಲ್ಲಿ ಭಾರತೀಯ ಲೇಖಕಿಯರು

ಗುರುವಾರ , ಮಾರ್ಚ್ 21, 2019
24 °C

ಬ್ರಿಟನ್: ಪ್ರಶಸ್ತಿ ಪಟ್ಟಿಯಲ್ಲಿ ಭಾರತೀಯ ಲೇಖಕಿಯರು

Published:
Updated:
ಬ್ರಿಟನ್: ಪ್ರಶಸ್ತಿ ಪಟ್ಟಿಯಲ್ಲಿ ಭಾರತೀಯ ಲೇಖಕಿಯರು

ಲಂಡನ್: ಬ್ರಿಟನ್‌ನಲ್ಲಿ ನೀಡಲಾಗುವ ವಾರ್ಷಿಕ ಮಹಿಳಾ ಪ್ರಶಸ್ತಿಯ ಅಂತಿಮ 16 ಮಂದಿಯ ಪಟ್ಟಿಯಲ್ಲಿ ಭಾರತದ ಲೇಖಕಿಯರಾದ ಅರುಂಧತಿ ರಾಯ್ ಹಾಗೂ ಮೀನಾ ಕಂದಸಾಮಿ ಸ್ಥಾನ ಪಡೆದಿದ್ದಾರೆ.

ಅರುಂಧತಿ ಅವರ ಕಾದಂಬರಿ ‘ದಿ ಮಿನಿಸ್ಟ್ರಿ ಆಫ್ ಅಟ್‌ಮೋಸ್ಟ್ ಹ್ಯಾಪಿನೆಸ್’ ಹಾಗೂ ಮೀನಾ ಅವರ ‘ವೆನ್ ಐ ಹಿಟ್ ಯು: ಆರ್, ಎ ಪೋರ್ಟ್ರೈಟ್ ಆಫ್ ದಿ ರೈಟರ್ ಆ್ಯಸ್ ಎ ಯಂಗ್ ವೈಫ್’ ಪುಸ್ತಕಗಳು ₹27 ಲಕ್ಷ (30 ಸಾವಿರ ಪೌಂಡ್) ಮೊತ್ತದ ಪ್ರಶಸ್ತಿಯ ಸುತ್ತಿನಲ್ಲಿವೆ.

2017 ಏಪ್ರಿಲ್‌ನಿಂದ 2018ರ ಮಾರ್ಚ್ ಅವಧಿಯಲ್ಲಿ ಬ್ರಿಟನ್‌ನಲ್ಲಿ ಪ್ರಕಾಶನಗೊಂಡ ಇಂಗ್ಲಿಷ್ ಕಾದಂಬರಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry