ಓದಿದ್ದು ಸಂಸ್ಕೃತ ಮಾಧ್ಯಮದಲ್ಲಿ, ರಚಿಸಿದ್ದು ಇಂಗ್ಲಿಷ್ ಪುಸ್ತಕ

7

ಓದಿದ್ದು ಸಂಸ್ಕೃತ ಮಾಧ್ಯಮದಲ್ಲಿ, ರಚಿಸಿದ್ದು ಇಂಗ್ಲಿಷ್ ಪುಸ್ತಕ

Published:
Updated:
ಓದಿದ್ದು ಸಂಸ್ಕೃತ ಮಾಧ್ಯಮದಲ್ಲಿ, ರಚಿಸಿದ್ದು ಇಂಗ್ಲಿಷ್ ಪುಸ್ತಕ

ನವದೆಹಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ಜನಿಸಿದ ಅನುಜ್ ತಿವಾರಿ, ಓದಿದ್ದು ಸಂಸ್ಕೃತ ಮಾಧ್ಯಮದಲ್ಲಿ. ಆದರೆ, ಇಂಗ್ಲಿಷ್‌ ಭಾಷೆ ಕಲಿಯಬೇಕು, ಅದರಲ್ಲಿ ಬರೆಯಬೇಕು ಎನ್ನುವ ಅವರಲ್ಲಿನ ಶ್ರದ್ಧೆ ಇಂದು ನಾಲ್ಕು ಇಂಗ್ಲಿಷ್‌ ಪುಸ್ತಕಗಳನ್ನು ಬರೆಯುವಂತೆ ಮಾಡಿದೆ.

‘ನಾನು ಓದಿದ ಶಾಲೆಯಲ್ಲಿ ಇಂಗ್ಲಿಷ್ ಪುಸ್ತಕಗಳು ಇರಲಿಲ್ಲ. ನನ್ನ ನೆರೆಹೊರೆಯವರು ಇಂಗ್ಲಿಷ್ ಕತೆಪುಸ್ತಕಗಳನ್ನು ಓದುತ್ತಿದ್ದಾಗ ನನಗೆ ಅದೆಲ್ಲ ಅಚ್ಚರಿ ಎನಿಸುತ್ತಿತ್ತು. ಆಗೆಲ್ಲ ನಾನು ಪುಸ್ತಕ ಬರೆಯುವ ಕನಸು ಕಾಣುತ್ತಿದ್ದೆ. ಆದರೆ ಇದನ್ನು ಕೇಳಿಸಿಕೊಂಡು ಉಳಿದವರು ನಗುತ್ತಾರೆನೋ ಎಂದು ಸುಮ್ಮನಾಗುತ್ತಿದ್ದೆ’ ಎಂದು ಕಾದಂಬರಿಕಾರ ತಿವಾರಿ ಹೇಳಿದ್ದಾರೆ.‌

‘ಹಿಂದಿ ಮತ್ತು ಇಂಗ್ಲಿಷ್‌ಗಿಂತಲೂ ನನಗೆ ಸಂಸ್ಕೃತ ಭಾಷೆ ಚೆನ್ನಾಗಿ ಬರುತ್ತದೆ. ಯಾವುದನ್ನು ನಮಗೆ ಇಷ್ಟವಿರುವುದಿಲ್ಲವೋ ಅದನ್ನು ಜೀವನ ಕಲಿಸುತ್ತದೆ’ ಎನ್ನುವ ತಿವಾರಿ, ಇದುವರೆಗೆ ನಾಲ್ಕು ಪುಸ್ತಕ ಬರೆದಿದ್ದಾರೆ. 2012ರಲ್ಲಿ ಬಿಡುಗಡೆ ಮಾಡಿದ ‘ಜರ್ನಿ ಆಫ್ ಟೂ ಹಾರ್ಟ್ಸ್‌’ ಮೊದಲನೆಯದು. ‘ಐ ಟ್ಯಾಗ್ಡ್‌ ಹರ್ ಇನ್‌ ಮೈ ಹಾರ್ಟ್‌’ ಅವರ ಈಚಿನ ಪುಸ್ತಕ. ಅವರ ಪುಸ್ತಕಗಳು ಹೆಚ್ಚು ಮಾರಾಟವಾಗುವ ಪುಸ್ತಕಗಳ ಪಟ್ಟಿಯಲ್ಲಿ ಹಲವು ಸಲ ಸ್ಥಾನ ಪಡೆದಿವೆ.

‘ನನಗೆ ಯಾವುದು ಪ್ರೇರಣೆ ನೀಡುತ್ತದೋ ಅದನ್ನು ಮಾತ್ರ ಬರೆಯುತ್ತೇನೆ. ನನ್ನ ಬರವಣಿಗೆಯೊಂದಿಗೆ ನಾನು ಬೆಸೆದುಕೊಂಡಿರುತ್ತೇನೆ. ಓದುಗರಿಗೂ ಇದೇ ಅನುಭವ ಆಗುತ್ತದೆ ಎಂದು ನಂಬಿದ್ದೇನೆ’ ಎನ್ನುತ್ತಾರೆ ತಿವಾರಿ. ಇದುವರೆಗೆ ದೇಶದ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡಿದ್ದಾರೆ. 2016ರ ಪ್ರಭಾವಶಾಲಿ ಅಗ್ರ ಹತ್ತು ಭಾರತೀಯ ಲೇಖಕರಲ್ಲಿ ತಿವಾರಿ ಸ್ಥಾನ ಪಡೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry