ನಾಗಾಲ್ಯಾಂಡ್ ಮುಖ್ಯಮಂತ್ರಿಯಾಗಿ ನೆಫಿಯು ರಿಯೊ ಪ್ರಮಾಣವಚನ

ಮಂಗಳವಾರ, ಮಾರ್ಚ್ 26, 2019
31 °C

ನಾಗಾಲ್ಯಾಂಡ್ ಮುಖ್ಯಮಂತ್ರಿಯಾಗಿ ನೆಫಿಯು ರಿಯೊ ಪ್ರಮಾಣವಚನ

Published:
Updated:
ನಾಗಾಲ್ಯಾಂಡ್ ಮುಖ್ಯಮಂತ್ರಿಯಾಗಿ ನೆಫಿಯು ರಿಯೊ ಪ್ರಮಾಣವಚನ

ಕೊಹಿಮಾ: ನ್ಯಾಷನಲಿಸ್ಟ್‌ ಡೆಮಾಕ್ರಟಿಕ್‌ ಪ್ರೊಗ್ರೆಸ್ಸಿವ್ ಪಕ್ಷದ (ಎನ್‌ಡಿಪಿಪಿ) ಮುಖಂಡ ನೆಫಿಯು ರಿಯೊ ಗುರುವಾರ ನಾಗಾಲ್ಯಾಂಡ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯಪಾಲ ಪಿ.ಬಿ.ಆಚಾರ್ಯ ಪ್ರಮಾಣವಚನ ಬೋಧಿಸಿದರು. ರಿಯೊ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಎನ್‌ಡಿಪಿಪಿ ಮತ್ತು ಬಿಜೆಪಿ ಮೈತ್ರಿಕೂಟದ ಸರ್ಕಾರ ಇಲ್ಲಿ ಅಸ್ತಿತ್ವಕ್ಕೆ ಬಂದಿದೆ.

ಬಿಜೆಪಿಯ ವೈ. ಪತ್ತೊನ್‌ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಬಿಜೆಪಿಯ ಐವರು, ಎನ್‌ಡಿಡಿಪಿಯ ಮೂವರು, ಒಬ್ಬ ಪಕ್ಷೇತರ

ಮತ್ತು ಜೆಡಿ(ಯು)ನ ಒಬ್ಬರು ಸೇರಿದಂತೆ ಒಟ್ಟು ಹತ್ತು ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್ ಭಾಗವಹಿಸಿದ್ದರು.

60 ಸದಸ್ಯಬಲದ ನಾಗಾಲ್ಯಾಂಡ್‌ ವಿಧಾನಸಭೆಯಲ್ಲಿ ಎನ್‌ಡಿಪಿಪಿಯ 18, ಬಿಜೆಪಿಯ 12, ಜೆಡಿ(ಯು)ನ ಒಬ್ಬ ಮತ್ತು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಈ ಮೈತ್ರಿ ಸರ್ಕಾರ ರಚನೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry