ಕ್ರಿಕೆಟ್‌: ಭಾರತ ‘ಎ’ ತಂಡಕ್ಕೆ ಸೋಲು

7

ಕ್ರಿಕೆಟ್‌: ಭಾರತ ‘ಎ’ ತಂಡಕ್ಕೆ ಸೋಲು

Published:
Updated:

ಮುಂಬೈ: ಭಾರತ ಮಹಿಳೆಯರ ‘ಎ’ ತಂಡ ಆಸ್ಟ್ರೆಲಿಯಾ ಎದುರಿನ ಎರಡನೇ ಅಭ್ಯಾಸ ಪಂದ್ಯದಲ್ಲಿ ಗುರುವಾರ ಏಳು ವಿಕೆಟ್‌ಗಳಿಂದ ಸೋತಿದೆ.

ಮೊದಲು ಬ್ಯಾಟ್ ಮಾಡಿದ ಭಾರತ ತಂಡ 46.2 ಓವರ್‌ಗಳಲ್ಲಿ 170ರನ್‌ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ಕೇವಲ 26 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಸುಲಭ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕಿ ಮೆಗ್‌ ಲ್ಯಾನಿಂಗ್‌ (63, 55ಎ, 9ಬೌಂ, 1ಸಿ) ಉತ್ತಮ ಆರಂಭ ನೀಡಿದರು.

ಭಾರತ ತಂಡದಲ್ಲಿ ಅನುಜಾ ಪಾಟೀಲ್‌ (49) ಅವರನ್ನು ಹೊರತುಪಡಿಸಿ ಉಳಿದ ಬ್ಯಾಟ್ಸ್‌ವುಮನ್‌ಗಳು ವಿಫಲರಾದರು.

ಸಂಕ್ಷಿಪ್ತ ಸ್ಕೋರು: ಭಾರತ ‘ಎ’: 46.2 ಓವರ್‌ಗಳಲ್ಲಿ 170 (ಅನುಜಾ ಪಾಟೀಲ್‌ 49; ವೆಲ್ಲಿಂಗ್ಟನ್‌ 30ಕ್ಕೆ3). ಆಸ್ಟ್ರೇಲಿಯಾ: 26 ಓವರ್‌ಗಳಲ್ಲಿ 3 ವಿಕೆಟ್‌ಗೆ 171 (ಮೆಗ್‌ ಲ್ಯಾನಿಂಗ್ 63, ಎಲಿಸಾ ಪೆರಿ 38; ಕವಿತಾ ಪಾಟೀಲ್‌ 21ಕ್ಕೆ1). ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 7 ವಿಕೆಟ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry