ಭದ್ರತಾ ಸಮಿತಿ ರಚನೆ

ಸೋಮವಾರ, ಮಾರ್ಚ್ 25, 2019
28 °C

ಭದ್ರತಾ ಸಮಿತಿ ರಚನೆ

Published:
Updated:
ಭದ್ರತಾ ಸಮಿತಿ ರಚನೆ

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಗೆ ದುಷ್ಕರ್ಮಿಯೊಬ್ಬ ಚಾಕು ಇರಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಹೈಕೋರ್ಟ್‌ ತನ್ನ ಮೂರು ಪೀಠಗಳು ಮತ್ತು ನ್ಯಾಯಮೂರ್ತಿಗಳ ನಿವಾಸಗಳ ಭದ್ರತಾ ವ್ಯವಸ್ಥೆ ಪರಿಶೀಲನೆಗೆ ‘ಭದ್ರತಾ ಸಮಿತಿ’ ರಚಿಸಿದೆ.

ಭದ್ರತಾ ಸಮಿತಿಯಲ್ಲಿ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಮತ್ತು ನ್ಯಾಯಮೂರ್ತಿ ರವಿ ಮಳೀಮಠ  ಇದ್ದಾರೆ. ಹಾಗೆಯೇ, ಆಡಳಿತ ವಿಭಾಗದ ರಿಜಿಸ್ಟ್ರಾರ್ ಸಮಿತಿಯಲ್ಲಿ ಪ್ರೆಸೆಂಟಿಂಗ್ ಆಫೀಸರ್ ಆಗಿದ್ದಾರೆ. ಈ ಸಮಿತಿಯು ಹೈಕೋರ್ಟ್  ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿ ಪೀಠ, ಮುಖ್ಯ ನ್ಯಾಯಮೂರ್ತಿ ಮತ್ತು  ನ್ಯಾಯಮೂರ್ತಿಗಳ ನಿವಾಸಗಳ ಭದ್ರತಾ ವ್ಯವಸ್ಥೆ ಪರಿಶೀಲಿಸಲಿದೆ.

ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರ ಆದೇಶಾನುಸಾರ ಭದ್ರತಾ ಸಮಿತಿ ರಚಿಸಿ ರಿಜಿಸ್ಟ್ರಾರ್ ಜನರಲ್ ಅಶೋಕ್ ಜಿ.ನಿಜಗಣ್ಣನವರ್ ಮಾರ್ಚ್ 7ರಂದು ಆದೇಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry