ಲೆನಿನ್ ಪ್ರತಿಮೆ ಧ್ವಂಸ ಮಾಡಿಲ್ಲ; ಖಾಸಗಿ ಸ್ಥಳದಲ್ಲಿ ಪ್ರತಿಮೆ ಸ್ಥಾಪಿಸಿದವರು ಅದನ್ನು ತೆರವು ಮಾಡಿದ್ದಾರೆ

7

ಲೆನಿನ್ ಪ್ರತಿಮೆ ಧ್ವಂಸ ಮಾಡಿಲ್ಲ; ಖಾಸಗಿ ಸ್ಥಳದಲ್ಲಿ ಪ್ರತಿಮೆ ಸ್ಥಾಪಿಸಿದವರು ಅದನ್ನು ತೆರವು ಮಾಡಿದ್ದಾರೆ

Published:
Updated:
ಲೆನಿನ್ ಪ್ರತಿಮೆ ಧ್ವಂಸ ಮಾಡಿಲ್ಲ; ಖಾಸಗಿ ಸ್ಥಳದಲ್ಲಿ ಪ್ರತಿಮೆ ಸ್ಥಾಪಿಸಿದವರು ಅದನ್ನು ತೆರವು ಮಾಡಿದ್ದಾರೆ

ನವದೆಹಲಿ: ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ 48 ಗಂಟೆಗಳಲ್ಲಿ ಬೆಲೊನಿಯಾ ಪ್ರದೇಶದಲ್ಲಿದ್ದ ಲೆನಿನ್ ವಿಗ್ರಹವನ್ನು ತೆರವು ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.

ಲೆನಿನ್ ಪ್ರತಿಮೆಯನ್ನು ಅಲ್ಲಿಂದ ತೆರವು ಮಾಡಿದ್ದಕ್ಕಾಗಿ ಬಿಜೆಪಿ ವಿರುದ್ಧ ಇತರ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು.

ತ್ರಿಪುರಾದಲ್ಲಿ ಮಣಿಕ್ ಸರ್ಕಾರ ರಾಜೀನಾಮೆ ನೀಡಿ ಬಿಜೆಪಿ ಅಧಿಕಾರಕ್ಕೇರಿದ ಹೊತ್ತಲ್ಲಿ ಬೆಲೊನಿಯಾ ಕಾಲೇಜು ವೃತ್ತದಲ್ಲಿದ್ದ ಕಮ್ಯುನಿಸ್ಟ್‌ ನಾಯಕ ಲೆನಿನ್‌ ಪ್ರತಿಮೆಯನ್ನು ಬುಲ್ಡೋಜರ್ ಬಳಸಿ ತೆರವುಗೊಳಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ರಾಮ್ ಮಾಧವ್, ಲೆನಿನ್ ಪ್ರತಿಮೆ ಧ್ವಂಸ ಮಾಡಿದ್ದಾರೆ ಎಂದು ಹೇಳುವುದು ಸರಿಯಲ್ಲ. ತ್ರಿಪುರಾದಲ್ಲಿ ಯಾವುದೇ ಪ್ರತಿಮೆಯನ್ನು ಹಾನಿಗೊಳಿಸಿಲ್ಲ. ಇದೊಂದು ತಪ್ಪು ಮಾಹಿತಿ. ಕೆಲವು ಜನರು ಖಾಸಗಿ ಸ್ಥಳವೊಂದರಲ್ಲಿ ಆ ಪ್ರತಿಮೆಯನ್ನು ಸ್ಥಾಪಿಸಿ ಆಮೇಲೆ ಅದನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ, ಅದು ಧ್ವಂಸಗೊಳಿಸಿದ್ದಲ್ಲ ಎಂದು ಹೇಳಿರುವುದಾಗಿ ಎಎನ್‍ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

ತ್ರಿಪುರಾದಲ್ಲಿನ ಘಟನೆ ಬಗ್ಗೆ ಆರ್‍ಎಸ್ಎಸ್ ಮತ್ತು ಬಿಜೆಪಿಯನ್ನು ಟೀಕಿಸುವವರ ಬಗ್ಗೆ ಮಾಧವ್ ಕಿಡಿ ಕಾರಿದ್ದಾರೆ. ಲೆನಿನ್ ಪ್ರತಿಮೆ ತೆರವು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಜಾಗತಿಕ ನಾಯಕರಿಗೆ ಗೌರವ ಕೊಡಬೇಕು ಎಂದಿದ್ದರು. ಪಶ್ಚಿಮ ಬಂಗಾಳದಲ್ಲೇ ವಿದ್ವಂಸಕ ಕೃತ್ಯಗಳು ನಡೆಯುತ್ತವೆ. ಮಮತಾ ಅವರು ಬೇರೆ ರಾಜ್ಯಗಳಲ್ಲಿ ಏನಾಗುತ್ತಿದೆ ಎಂದು ನೋಡುವ ಬದಲು ತಮ್ಮ ರಾಜ್ಯದಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ಗಮನಹರಿಸಲಿ ಎಂದು ಮಾಧವ್ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry