ಭ್ರಷ್ಟಾಚಾರ ಆರೋಪ: 9 ಅಧಿಕಾರಿಗಳಿಗೆ ಸಂಬಂಧಿಸಿದ 36 ಸ್ಥಳಗಳ ಮೇಲೆ ಎಸಿಬಿ ದಾಳಿ

ಭಾನುವಾರ, ಮಾರ್ಚ್ 24, 2019
32 °C

ಭ್ರಷ್ಟಾಚಾರ ಆರೋಪ: 9 ಅಧಿಕಾರಿಗಳಿಗೆ ಸಂಬಂಧಿಸಿದ 36 ಸ್ಥಳಗಳ ಮೇಲೆ ಎಸಿಬಿ ದಾಳಿ

Published:
Updated:
ಭ್ರಷ್ಟಾಚಾರ ಆರೋಪ: 9 ಅಧಿಕಾರಿಗಳಿಗೆ ಸಂಬಂಧಿಸಿದ 36 ಸ್ಥಳಗಳ ಮೇಲೆ ಎಸಿಬಿ ದಾಳಿ

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 9 ಅಧಿಕಾರಿಗಳಿಗೆ ಸಂಬಂಧಿಸಿದ 36 ಸ್ಥಳಗಳ ಮೇಲೆ ದಾಳಿ ನಡೆಸಿರುವುದಾಗಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ರಮ ಆಸ್ತಿ ಗಳಿಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಎಸಿಬಿಯ ವಿವಿಧ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ ಎಂದೂ ಹೇಳಲಾಗಿದೆ.

ಎಸಿಬಿ ಅಧಿಕಾರಿಗಳು ಇಲ್ಲಿವರೆಗೆ ಶೋಧಕಾರ್ಯ ನಡೆಸಿರುವ ಸ್ಥಳಗಳ ಮಾಹಿತಿ ಇಲ್ಲಿದೆ.


ಅಧಿಕಾರಿ

ಕಾರ್ಯ ನಿರ್ವಹಿಸುತ್ತಿರುವ ಇಲಾಖೆ

ದಾಳಿ/ ಶೋಧ ನಡೆಸಿದ ಸ್ಥಳ

ಆರ್. ಗಂಗಾಧರ್

ಸಹಾಯಕ ಕಾರ್ಯಪಾಲಕ ಅಭಿಯಂತರರು – ಘನ ತಾಜ್ಯ ನಿರ್ವಹಣೆ, ಚಿಕ್ಕಪೇಟೆ ವಿಭಾಗ, ಬಿಬಿಎಂಪಿ, ಬಸವನಗುಡಿ, ಬೆಂಗಳೂರು


* ನಗರದ ನಂದಿನಿ ಬಡಾವಣೆಯಲ್ಲಿರುವ ವಾಸದ ಮನೆ

* ಕಚೇರಿ


ರಾಜಶ್ರೀ ಜೈನಾಪುರ

ವಿಶೇಷ ಭೂಸ್ವಾಧೀನ ಅಧಿಕಾರಿ,

ಹಿಪ್ಪರಗಿ ಅಣೆಕಟ್ಟು ಯೋಜನೆ ಅಥಣಿ, ಬೆಳಗಾವಿ


* ಬೆಳಗಾವಿಯಲ್ಲಿರುವ  ವಾಸದ ಮನೆ ಸೇರಿ 3 ಮನೆಗಳು

* ಅಥಣಿಯಲ್ಲಿನ ಕಛೇರಿ


* ಹುಬ್ಬಳ್ಳಿಯಲ್ಲಿರುವ ಇನ್ನೊಂದು ಮನೆ


ವಿನೋದ್ ಕುಮಾರ್

ಡೆಪ್ಯೂಟಿ ಸೂಪರಿಂಟೆಂಡೆಂಟ್, ಅಬಕಾರಿ ಇಲಾಖೆ, ಉಡುಪಿ

* ಮಂಗಳೂರಿನಲ್ಲಿರುವ ಎರಡು ಮನೆಗಳು

* ಚಾಲಕನ ಮನೆ


* ಕುಕ್ಕಂದೂರು, ಉಡುಪಿಯಲ್ಲಿರುವ ಮನೆಗಳು

* ಕಚೇರಿ


ಪಿ. ವಿಜಯಕುಮಾರ್

ಸಹಾಯಕ ಅಭಿಯಂತರ

ಗ್ರಾಮೀಣ ಕುಡಿಯುವ ನೀರು ಉಪವಿಭಾಗ, ಗಂಗಾವತಿ

ಮತ್ತು (ಪ್ರಭಾರ) ಸಹಾಯಕ ಕಾರ್ಯಪಾಲಕ ಅಭಿಯಂತರು, ಪಂಚಾಯತ್ ರಾಜ್ ಇಂಜಿನಿಯರಿಂಗ್, ಗಂಗಾವತಿ


* ಕಚೇರಿಗಳು

* ಗಂಗಾವತಿಯಲ್ಲಿರುವ  ವಾಸದ ಮನೆ, ಬೆಂಗಳೂರಿನಲ್ಲಿರುವ ಮತ್ತೊಂದು ಮನೆ ಸೇರಿ ಒಟ್ಟು 3 ಮನೆಗಳು


ಎನ್.ಅಪ್ಪಿ ರೆಡ್ಡಿ

ಸಹಾಯಕ ಅಭಿಯಂತರರು, ಗ್ರಾಮೀಣ ನೀರು ಸರಬರಾಜು ಮತ್ತು ಒಳಚರಂಡಿ,

ಕೋಲಾರ.

* ಶ್ರೀನಿವಾಸಪುರದಲ್ಲಿರುವ ವಾಸದ ಮನೆ ಸೇರಿ 3 ಮನೆಗಳು ಹಾಗೂ ಪೌಲ್ಟ್ರಿ ಫಾರಂ

* ಕಛೇರಿ


ಶಿವಕುಮಾರ್ ಎ.ಪಿ.

ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಕಡೂರು

* ಟಿಪಟೂರಿನ ವಾಸದ ಮನೆ ಸೇರಿ ಎರಡು ಮನೆಗಳು

* ಕಚೇರಿ


ರಘುನಾಥ

ವೈದೈಕೀಯ ಅಧಿಕಾರಿ, ಬಣವಾಡಿ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ

* ಕುದೂರಿನಲ್ಲಿರುವ ವಾಸದ ಮನೆ

* ಖಾಸಗಿ ಕ್ಲಿನಿಕ್


* ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಬಾಣವಾಡಿ


ರುದ್ರ ಪ್ರಸಾದ್

ಎಸ್.ಬಿ, ಅಧೀಕ್ಷಕರು, ಕೆ.ಜಿ.ಐ.ಡಿ, ಬೆಂಗಳೂರು

* ಬೆಂಗಳೂರಿನಲ್ಲಿರುವ ವಾಸದ ಮನೆ ಸೇರಿ 3 ಮನೆಗಳು

* ಕಚೇರಿ


ಕೆ.ಸಿ ವಿರುಪಾಕ್ಷ

ಎಸ್.ಡಿ.ಎ, ಆರ್‌ಟಿಓ ಕಛೇರಿ, ಚಿಕ್ಕಮಗಳೂರು.

* ಚಿಕ್ಕಮಗಳೂರಿನಲ್ಲಿರುವ ವಾಸದ ಮನೆ

* ಕಛೇರಿ

* ಹಾಸನದಲ್ಲಿರುವ ಇನ್ನೊಂದು ಮನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry