ಹಂದಿ ದಾಳಿಗೆ ಚಿರತೆ ಬಲಿ

ಶುಕ್ರವಾರ, ಮಾರ್ಚ್ 22, 2019
28 °C

ಹಂದಿ ದಾಳಿಗೆ ಚಿರತೆ ಬಲಿ

Published:
Updated:
ಹಂದಿ ದಾಳಿಗೆ ಚಿರತೆ ಬಲಿ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯ ಕೊಟೆಕೆರೆ ಗ್ರಾಮದ ಬಳಿ ಗುರುವಾರ ಹಂದಿ ದಾಳಿಯಿಂದ ಚಿರತೆ ಮೃತಪಟ್ಟಿದೆ.

ಚಿರತೆಗೆ ಸುಮಾರು 5ರಿಂದ 6 ವರ್ಷ ವಯಸ್ಸಾಗಿದೆ. ಚಿರತೆ ಹಂದಿಯನ್ನು ಬೇಟೆಯಾಡುವಾಗ, ಹಂದಿಯೇ ಕುತ್ತಿಗೆ ಭಾಗಕ್ಕೆ ತಿವಿದು ಸಾಯಿಸಿದೆ. ದಾಳಿಯ ರಭಸಕ್ಕೆ ಚಿರತೆಯ ಕುತ್ತಿಗೆ ಮೂಳೆ ಮುರಿದು ಹೋಗಿದೆ ಎಂದು ವಲಯ ಅರಣ್ಯಾಧಿಕಾರಿ ನವೀನ್‌ಕುಮಾರ್ ತಿಳಿಸಿದರು.

ಸ್ಥಳಕ್ಕೆ ಎಸಿಎಫ್ ನಟರಾಜು, ವೈದ್ಯ ನಾಗರಾಜು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry