ವಿನಯ ಕುಲಕರ್ಣಿ, ಅಮೃತ ದೇಸಾಯಿ ಬೆಂಬಲಿಗರ ಫೇಸ್‌ಬುಕ್‌ ಕೆಸರೆರಚಾಟ

7

ವಿನಯ ಕುಲಕರ್ಣಿ, ಅಮೃತ ದೇಸಾಯಿ ಬೆಂಬಲಿಗರ ಫೇಸ್‌ಬುಕ್‌ ಕೆಸರೆರಚಾಟ

Published:
Updated:
ವಿನಯ ಕುಲಕರ್ಣಿ, ಅಮೃತ ದೇಸಾಯಿ ಬೆಂಬಲಿಗರ ಫೇಸ್‌ಬುಕ್‌ ಕೆಸರೆರಚಾಟ

ಧಾರವಾಡ: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳಿಗೆ ಟಿಕೆಟ್‌ ಚಿಂತೆಯಾದರೆ, ಅವರ ಬೆಂಬಲಿಗರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕಾಲೆಳೆಯಲು ಆರಂಭಿಸಿದ್ದಾರೆ. ಇಂಥದ್ದೊಂದು ಪೋಸ್ಟ್‌ ಈಗ ಚರ್ಚೆಯ ವಿಷಯವಾಗಿದೆ.

ಬಾಪು ಪಾಟೀಲ ಎಂಬುವವರು ಜೈ ಬಿಜೆಪಿ ಎಂದು ಒಂದು ಪೋಸ್ಟ್ ಹಾಕಿ, ಅದರಲ್ಲಿ ವಿನಯ ಕುಲಕರ್ಣಿ ಭಾವಚಿತ್ರದೊಂದಿಗೆ ‘ಈ ಬಾರಿ ಬಿಜೆಪಿ ಸರ್ಕಾರ: ಕೈಮುಗಿದು ಕೇಳುತ್ತೇನೆ ಬಿಜೆಪಿಗೆ ಮತ ನೀಡಿ’ ಎಂದು ಮನವಿ ಮಾಡಿಕೊಂಡ ಚಿತ್ರ ಹಾಕಿದ್ದಾರೆ.

ಇದನ್ನು ಗುರುನಾಥಗೌಡ ಗೌಡರ ಸೇರಿದಂತೆ ಇತರ ಐವರೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನು 669 ಜನ ಲೈಕ್‌ ಮಾಡಿದ್ದಾರೆ. 147 ಕಮೆಂಟ್‌ಗಳು ಬಂದಿವೆ. ಈ ಪೋಸ್ಟ್‌ಗೆ ಪ್ರತಿಯಾಗಿ ಮೈಲಾರ ಪಾಟೀಲ ಎಂಬುವವರು ಆನಂದ ಬೆಳಗಲಿ ಹಾಗೂ ಇತರ 30 ಜನರೊಂದಿಗೆ ಚಿತ್ರವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅಮೃತ ದೇಸಾಯಿ ಕೈಮುಗಿದಿರುವ ಚಿತ್ರಕ್ಕೆ, ‘ನಮ್ಮ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಹರಿಹಾರನಾದ ಸನ್ಮಾನ್ಯ ವಿನಯ ಕುಲಕರ್ಣಿ ಅವರಿಗೆ ಮತ್ತೊಮ್ಮೆ ಬಹುಮತಗಳಿಂದ ಗೆಲ್ಲಿಸಬೇಕೆಂದು ತಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ’ ಎಂದಿದೆ.

ಈ ಪೋಸ್ಟ್‌ಗೆ 236 ಲೈಕ್‌, 6 ಶೇರ್‌ ಹಾಗೂ 44 ಕಮೆಂಟ್‌ಗಳು ಇವೆ. ಕೆಲವು ಗಂಟೆಗಳ ನಂತರ ಬಾಪು ಪಾಟೀಲ, ತಮ್ಮ ಪೋಸ್ಟ್ ಅಳಿಸಿಹಾಕಿದ್ದಾರೆ. ಚುನಾವಣೆಗೂ ಪೂರ್ವದಲ್ಲೇ ನಾಯಕರಿಬ್ಬರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ‘ಪೋಸ್ಟ್‌ ಯುದ್ಧ’ ಆರಂಭಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry