ಮೊಹಮ್ಮದ್ ಶಮಿ, ಆತನ ಸಹೋದರ ವಿರುದ್ಧ ದೂರು ದಾಖಲಿಸಿದ ಪತ್ನಿ ಹಸೀನ್

ಮಂಗಳವಾರ, ಮಾರ್ಚ್ 26, 2019
33 °C

ಮೊಹಮ್ಮದ್ ಶಮಿ, ಆತನ ಸಹೋದರ ವಿರುದ್ಧ ದೂರು ದಾಖಲಿಸಿದ ಪತ್ನಿ ಹಸೀನ್

Published:
Updated:
ಮೊಹಮ್ಮದ್ ಶಮಿ, ಆತನ ಸಹೋದರ ವಿರುದ್ಧ ದೂರು ದಾಖಲಿಸಿದ ಪತ್ನಿ ಹಸೀನ್

ಕೊಲ್ಕತ್ತ: ಭಾರತೀಯ ಕ್ರಿಕೆಟ್ ತಂಡದ ಬೌಲರ್ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜೋಹಾನ್ ಅವರು ಶಮಿ ಹಾಗೂ ಕುಟುಂಬದ ನಾಲ್ವರ ವಿರುದ್ದ ಕೊಲ್ಕತ್ತಾದ ಜಾಧವ್‌ಪುರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ.

ಶಮಿ ವಿರುದ್ಧ  ಕೊಲೆಯತ್ನ, ಕೊಲೆ ಬೆದರಿಕೆ, ಹಿಂಸಾಚಾರ ಹಾಗೂ ಸಹೋದರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.

'ಕಳೆದ ವರ್ಷ ಉತ್ತರ ಪ್ರದೇಶದಲ್ಲಿರುವ ಅತ್ತೆಯ ಮನೆಗೆ ತೆರಳಿದ್ದ ಅವಧಿಯಲ್ಲಿ ನನ್ನ ಪತಿ ಶಮಿಯ ಸಹೋದರ ಹಸೀಬ್ ಅಹಮದ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಹಸೀನ್ ದೂರಿನಲ್ಲಿ ಹೇಳಿದ್ದಾರೆ.

ಅಲ್ಲದೇ ಶಮಿ ನನ್ನನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸಿಸಿದ್ದಾರೆ. ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಪತ್ನಿಯ ಆರೋಪವನ್ನು ತಳ್ಳಿಹಾಕಿರುವ ಶಮಿ, 'ಅನ್ಯರು ನನ್ನ ಪತ್ನಿಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದಾರೆ. ಹಸೀನ್ ಮತ್ತು ಆಕೆಯ ಕುಟುಂಬದವರು ಸಮಸ್ಯೆಯನ್ನು ಮಾತನಾಡಿ ಬಗೆಹರಿಸಿಕೊಳ್ಳೋಣ ಎಂದಿದ್ದರು. ಆದರೆ ನನ್ನ ಪತ್ನಿಯನ್ನು ಯಾರು ದಾರಿತಪ್ಪಿಸುತ್ತಿದ್ದಾರೆ ಎಂದು ತಿಳಿದಿಲ್ಲ' ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry